ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಕಾರವಾರ(Karwar) :ಉತ್ತರ ಕನ್ನಡ(Uttarkannada) ಜಿಲ್ಲೆಯ ಕಾರವಾರದ ರಾಷ್ಟ್ರೀಯ ಹೆದ್ದಾರಿ(Karwar NH) ಅವ್ಯವಸ್ಥೆಯಿಂದ ಖ್ಯಾತ ವೈದ್ಯರೊಬ್ಬರು ಸಾವನ್ನಪ್ಪಿದ್ದಾರೆ.
ತಾಲ್ಲೂಕಿನ ಮಾಜಾಳಿ ರಾ. ಹೆದ್ದಾರಿ66 ರಲ್ಲಿ ಜಾನುವಾರುಗಳು ಅಡ್ಡ ಬಂದು ಬೈಕ್ ನಲ್ಲಿ ತೆರಳುತ್ತಿದ್ದ ವೈದ್ಯರು ಮೃತಪಟ್ಟಿದ್ದಾರೆ. ಕಾರವಾರದ ಚರ್ಮರೋಗ ತಜ್ಞ ಡಾ ಸುಭಾಷ್ ತಾಂಡೇಲ್(Skin Specialist Dr Subhas Tandel) ಅವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಕಾರವಾರದಿಂದ ಮಾಜಾಳಿ(Karwar to Majali) ಕಡೆ ಬುಧವಾರ ರಾತ್ರಿ 9ಗಂಟೆ ಸುಮಾರಿಗೆ ಬೈಕ್ ನಲ್ಲಿ ತೆರಳುತ್ತಿದ್ದರು. ಹಸುವೊಂದು ಹಠಾತ್ತನೆ ಅವರು ಪ್ರಯಾಣಿಸುತ್ತಿದ್ದ ವಾಹನದ ಮುಂದೆ ಬಂದು ಅಪಘಾತ ಸಂಭವಿಸಿದೆ ಎನ್ನಲಾಗಿದೆ. ತೀವೃ ಗಾಯಗೊಂಡ ಅವರು ರಕ್ತಸ್ರಾವ ಉಂಟಾಗಿ ಮೃತಪಟ್ಟಿದ್ದಾರೆ.
ಡಾ. ತಾಂಡೇಲ್ ಕಳೆದ ಹಲವು ವರ್ಷಗಳಿಂದ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದರು. ಕಾರವಾರ ಜಿಲ್ಲೆಯ ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ನಂತರ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (KRIMS) ಸೇವೆ ಸಲ್ಲಿಸಿದ್ದರು. ಅವರು ಕಾಂಗ್ರೆಸ್ ನಾಯಕ ಮತ್ತು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪಿ.ಎಂ. ತಾಂಡೇಲ್ ಅವರ ಪುತ್ರ. ಅವರ ಅಕಾಲಿಕ ಮರಣವು ಅವರ ಕುಟುಂಬಕ್ಕೆ ಮತ್ತು ಅವರನ್ನು ತಿಳಿದ ಎಲ್ಲರಿಗೂ ಅಪಾರ ನಷ್ಟವಾಗಿದೆ.
ಈ ಅಪಘಾತ ಜಾನುವಾರು ಅಡ್ಡ ಬಂದು ಆಗಿದೆಯಾ ಅಥವಾ ಹಿಟ್ ಆ್ಯಂಡ್ ರನ್ ಆಗಿರಬಹುದಾ ಎಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.