​ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news)ಅಂಕೋಲಾ (Ankola): ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಜೇಬಗಳ್ಳತನ ಮಾಡುತ್ತಿದ್ದ ಆರೋಪದ ಮೇಲೆ ಅಂತರ ಜಿಲ್ಲಾ ಗ್ಯಾಂಗ್‌ನ ಆರು ಸದಸ್ಯರನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

​ನವೆಂಬರ್ 18 ರಂದು ಮಧ್ಯಾಹ್ನ 13.00 ರಿಂದ 13.15 ಗಂಟೆಯ ನಡುವೆ ಕಾರವಾರದ ಪ್ರದೀಪ ಮುರ್ಸಪ್ಪ ಕೇಣಿ ಶಿರವಾಡ ಅವರು ತಮ್ಮ ಕುಟುಂಬದೊಂದಿಗೆ ಕಾರವಾರಕ್ಕೆ ತೆರಳಲು ಅಂಕೋಲಾ ಬಸ್ ಸ್ಟ್ಯಾಂಡ್‌ನಲ್ಲಿ ಬಸ್ ಹತ್ತುತ್ತಿದ್ದರು. ಈ ವೇಳೆ ಅವರ ಪ್ಯಾಂಟ್ ಕಿಸೆಯಲ್ಲಿದ್ದ ₹7,500 ಹಣವನ್ನು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ: 220/2026, ಕಲಂ: 303(2) ಬಿಎನ್‌ಎಸ್-2023 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು.

​ಬಂಧಿತ ಆರೋಪಿಗಳು ಮತ್ತು ವಶಪಡಿಸಿಕೊಂಡ ಸೊತ್ತು: ​ಪ್ರಕರಣದ ಬೆನ್ನತ್ತಿದ ವಿಶೇಷ ತಂಡವು ನವೆಂಬರ್ 19 ರಂದು ಖಚಿತ ಮಾಹಿತಿ ಆಧರಿಸಿ ಶಿವಮೊಗ್ಗ ಜಿಲ್ಲೆಯ ತಾಳಗುಪ್ಪದ ಬಸ್ ಸ್ಟ್ಯಾಂಡ್ ಬಳಿ ಆರು ಜನ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿತು.

ಸಿದ್ದರಾಮೇಶ್ವರ ನಗರ, ಹುಬ್ಬಳ್ಳಿಯ ​ರಾಘವೇಂದ್ರ ತಂದೆ ರತ್ನಾಕರ ಜಮಖಂಡಿ, ಸೆಟಲ್‌ಮೆಂಟ್ ಏರಿಯಾ, ಹುಬ್ಬಳ್ಳಿಯ ​ಮಹೇಶ ತಂದೆ ಸಾತಪ್ಪ ಕಾಳಿ, ಅಣ್ಣಪ್ಪ ತಂದೆ ಮಾರುತಿ ಮತ್ತಿಕಟ್ಟಿ ಬನ್ನಿಮಹಾಕಾಳಿನಗರ, ​ರಾಘವೇಂದ್ರ ರಮೇಶ ನಾಗವೇಕರ, ಬಾಳಿನಚೌಕಿ, ಹುಬ್ಬಳ್ಳಿ, ​ರಾಕೇಶ ತಂದೆ ಮಧುಕರ ಗುಂಜಾಳ ಗಂಗಾಧರ ನಗರ, ​ಮಂಜುನಾಥ ತಂದೆ ಬಸವರಾಜ ದೊಡ್ಡನಿ 7ನೇ ಕ್ರಾಸ್, ಹನುಮಂತನಗುಡಿ ಹತ್ತಿರ ಇವರನ್ನ ವಿಚಾರಣೆಗೊಳಪಡಿಸಿದಾಗ ಆರೋಪಿಗಳು ಕೃತ್ಯವನ್ನು ಒಪ್ಪಿಕೊಂಡಿದ್ದಾರೆ

ಅವರಿಂದ ಕೃತ್ಯಕ್ಕೆ ಬಳಸಿದ್ದ ಟವೆರಾ ವಾಹನ (ಸಂಖ್ಯೆ: ಕೆ.ಎ.-25/ಪಿ-8949) ಹಾಗೂ ಕಳುವಾದ ಸೊತ್ತನ್ನು ಜಪ್ತು ಮಾಡಲಾಗಿದೆ. ಬಳಿಕ ದಸ್ತಗಿರಿ ನಿಯಮಗಳನ್ನು ಪಾಲಿಸಿ ರಿಮಾಂಡ್‌ನೊಂದಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

​ಕಾರ್ಯಾಚರಣೆ ತಂಡಕ್ಕೆ ಶ್ಲಾಘನೆ: ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ., ಹಾಗೂ ಕಾರವಾರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಎಸ್.ಲೋಕಾಪುರ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ. ಅಂಕೋಲಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ ನೇತೃತ್ವದಲ್ಲಿ ಪಿ.ಎಸ್.ಐ ಗಳಾದ ವಿಶ್ವನಾಥ ನಿಂಗೊಳ್ಳಿ, ಶ್ರೀಮತಿ ಲಲಿತಾ ರಜಪೂತ, ಎಎಸ್‌ಐ-ದೇವಿದಾಸ ಚಾಹೋಲೆಕರ ಮತ್ತು ಸಿಬ್ಬಂದಿಗಳಾದ ಸಿ.ಹೆಚ್.ಸಿ 763 ಪ್ರಶಾಂತ ನಾಯ್ಕ, ಸಿ.ಹೆಚ್.ಸಿ 1314 ಮಹಾದೇವ ಸಿದ್ದಿ, ಸಿಹೆಚ್‌ಸಿ-1557 ಶಫೀ ಶೇಖ್, ಮಹೆಚ್‌ಸಿ-1632 ಶೋಭಾ ನಾಯ್ಕ, ಸಿಪಿಸಿ-967 ಆಸೀಫ್ ಕುಂಕೂರು, ಸಿಪಿಸಿ-579 ದೇವಪ್ಪಾ ಕಾಗನೂರು ಅವರ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ತನಿಖೆ ಮುಂದುವರಿದಿದೆ. ಪ್ರಕರಣ ಪತ್ತೆ ಮಾಡಿದ ಠಾಣೆಯ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಅಭಿನಂದಿಸಲಾಗಿದೆ.