ಶಿರಸಿ: ತಾಲೂಕಿನ ಸೋಂದಾ ಕ್ರಾಸ್ ಬಳಿ ರಸ್ತೆ ಪಕ್ಕದ ಧರೆಗೆ ಬೈಕ್ ಗುದ್ದಿದ ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ  ನಡೆದಿದೆ.

ಸುಮಂತ ಮಹಾಬಲೇಶ್ವರ ಹೆಗಡೆ (35) ಮೃತ ಬೈಕ್ ಸವಾರ. ಮೃತ ಯಲ್ಲಾಪುರ ತಾಲೂಕಿನ ಕುಂದರಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಭರತನಳ್ಳಿಯವ ಎಂದು ಗುರುತಿಸಲಾಗಿದೆ.

  ಸುಮಂತ ಶಿರಸಿ ಕಡೆಯಿಂದ ಮನೆಯಾದ ಭರತನಹಳ್ಳಿ ಕಡೆಗೆ ಭಾನುವಾರ  ರಾತ್ರಿ ತೆರಳುತ್ತಿದ್ದಾಗ  ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ, ಶಿರಸಿ-ಯಲ್ಲಾಪುರ ರಸ್ತೆ, ಸೊಂದಾ ಕ್ರಾಸ್ ಸಮೀಪದ ತಿರುವು ಮತ್ತು ಇಳಜಾರಿನ ರಸ್ತೆಯಲ್ಲಿ ಬೈಕ್ ನ ವೇಗ ನಿಯಂತ್ರಿಸಲಾಗದೇ, ಧರೆಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ರಭಸಕ್ಕೆ ತಲೆಗೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.