ಹಳಿಯಾಳ‌ : ತಾಲೂಕಿನ ವ್ಯಕ್ತಿಯೊರ್ವ ಎರಡು ವರ್ಷಗಳಿಂದ ಧರಿಸಿದ ಮಾಲೆ ತೆಗೆಯದೆ ಅಕ್ರಮ ವ್ಯವಹಾರ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದೆ.

ಅಯ್ಯಪ್ಪ ಸ್ವಾಮಿಯ ವೃತಾಚರಣೆಯ ನಿಯಮ ಉಲ್ಲಂಘಿಸಿ ಸಾರ್ವಜನಿಕರಿಗೆ ಮೋಸ ಮಾಡುತ್ತಿರುವ ಬಗ್ಗೆ ಹಳಿಯಾಳದ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಿ ದೇವಸ್ಥಾನ ಟ್ರಸ್ಟ್ ಕಮಿಟಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ‌ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದೆ.

ರಾಕೇಶ ದಿನಕರ ವಾಲೇಕರ ಎಂಬಾತನ ಮೇಲೆ ದೂರು ಕೇಳಿ ಬಂದಿದೆ. ಈತ ಹಿಂದೆ ಸನ್ನಿಧಿಗೆ ಬಂದು ಮಾಲಾಧಾರಣೆ ಮಾಡಿದ ಬಳಿಕ ಇರುಮುಡಿ ಕಟ್ಟಿಕೊಂಡು ಶಬರಿ ಯಾತ್ರೆಗೆ ಬಂದು ನಮ್ಮ ಜೊತೆ ವೃತವನ್ನು ಮುಕ್ತಾಯಗೊಳಿಸಿದ್ದರು. ಆದರೆ ಇದಾದ ಬಳಿಕ ಹಳಿಯಾಳಕ್ಕೆ ಬಂದ ಈತ ಮತ್ತೆ ನಿಯಮದ ವಿರುದ್ದವಾಗಿ ಮಾಲಾಧಾರಣೆ ಮಾಡಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದು ಈ ಬಗ್ಗೆ ಹಳಿಯಾಳ ಅಯ್ಯಪ್ಪ ಸನ್ನಿಧಿಗೆ ದೌರ್ಜನ್ಯಕ್ಕೆ ಒಳಗಾದ ಸಾರ್ವಜನಿಕರು ಹಾಗೂ ಕುಟುಂಬಸ್ಥರು ಮೇಲಿಂದ ಮೇಲೆ ಬಂದು ದೂರು ಸಲ್ಲಿಸುತ್ತಿದ್ದು, ತಮ್ಮ ನೋವು ತೊಡಿಕೊಳ್ಳುತ್ತಿದ್ದು ನ್ಯಾಯ ಒದಗಿಸುವಂತೆ ಅಂಗಲಾಚುತ್ತಿದ್ದಾರೆ.

ಈ ಬಗ್ಗೆ ಅಯ್ಯಪ್ಪ ಸ್ವಾಮಿ ಸನ್ನಿಧಿಯಿಂದ ಸ್ಪಷ್ಟನೆ ನೀಡಿದ್ದು ಒಮ್ಮೆ ಅಯ್ಯಪ್ಪ ಸ್ವಾಮಿಯ ವೃತಾಚರಣೆ ಸಂಪನ್ನಗೊಂಡ ಮೇಲೆ ಧರಿಸಿದ ಅಯ್ಯಪ್ಪ ಮಾಲೆಯನ್ನು ತೆಗೆಯಬೇಕಾಗುತ್ತದೆ. ಒಂದಾನುವೇಳೆ ಮಾಲೆಯನ್ನು ತೆಗೆಯದೆ ಇದ್ದರೆ ಆ ಮಾಲಾ ಆಚರಣೆಗೆ ಮತ್ತು ಆ ವೃತಕ್ಕೆ ಯಾವುದೆ ಮಾನ್ಯತೆ ಗೌರವ ಇರುವುದಿಲ್ಲ.

ಧಾರ್ಮಿಕ ಭಾವನೆಗೆ ಧಕ್ಕೆ : ಹಳಿಯಾಳದ ಅಯ್ಯಪ್ಪ ಸ್ವಾಮಿ ಮಾಲಾದಾರಿಗಳು ಮಾಲೆಯನ್ನು ಧರಿಸಿದಾಗ ಕಟ್ಟುನಿಟ್ಟಿನ ವೃತವನ್ನು ಪಾಲಿಸುತ್ತಾರೆ. ಆದರೆ ರಾಕೇಶ ದೀನಕರ ವಾಲೇಕರ ಎಂಬುವನು ಅಯ್ಯಪ್ಪ ಸ್ವಾಮಿ ಮಾಲೆಯನ್ನು ಧರಿಸಿಕೊಂಡು ಜನರಿಗೆ ಮೋಸ ಮಾಡುತ್ತಿದ್ದಾನೆ. ಇದರಿಂದ ಮಾಲೆ ಧರಿಸುವ ಭಕ್ತ ವೃಂದಕ್ಕೂ, ಸ್ವಾಮಿಯ ಸನ್ನಿಧಿಗೂ ಹಾಗೂ ಅಯ್ಯಪ್ಪ ಸ್ವಾಮಿ ಭಕ್ತಾದಿಗಳ ಮತ್ತು ಹಿಂದೂ ಧಾರ್ಮಿಕ ಭಾವನೆಗಳಿಗೂ ತೀವ್ರ ಧಕ್ಕೆ ಉಂಟಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ..

ಹಳಿಯಾಳ ತಾಲೂಕಿನ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಮತ್ತು ಅಯ್ಯಪ್ಪ ಸ್ವಾಮಿ ಟ್ರಸ್ಟ್ ಕಮಿಟಿ ಹಳಿಯಾಳ ಮತ್ತು ಸಾರ್ವಜನಿಕರು ತಮ್ಮಲ್ಲಿ ವಿನಂತಿಸಿಕೊಳ್ಳುದೆನೇಂದರೆ, ರಾಕೇಶ ವಾಲೇಕರ ಇತನ ಎಲ್ಲ ವ್ಯವಹಾರಗಳ ಮೇಲೆ ತನಿಖೆ ನಡೆಸಿ ಶೀಘ್ರವೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಹಳಿಯಾಳದ ಅಯ್ಯಪ್ಪ ಸ್ವಾಮಿ ಸನ್ನಿಧಿಯವರು ಕಪಟ ಮಾಲಾಧಾರಿಯಿಂದ ತೊಂದರೆಗೊಳಗಾದ ಬಗ್ಗೆ ಹಳಿಯಾಳ ತಹಶಿಲ್ದಾರ್ ಕಚೇರಿಗೆ ಆಗಮಿಸಿ ಗ್ರೇಡ್ ೨ ತಹಶಿಲ್ದಾರ್‌ ಜಿ ಕೆ ರತ್ನಾಕರ್ ಹಾಗೂ ಪೋಲಿಸ್ ಠಾಣೆಗೆ ಆಗಮಿಸಿ ಪಿಎಸ್ ಐ ಮಹಾಂತೇಶ ಕುಂಬಾರ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಸನ್ನಿಧಿ ಸೇವಾ ದೇವಸ್ಥಾನ ಟ್ರಸ್ಟ್ ಕಮೀಟಿ ಅಧ್ಯಕ್ಷರು, ಗುರು ಸ್ವಾಮಿ ಮಂಜುನಾಥ ತೆಲಂಗ, ಕಾರ್ಯದರ್ಶಿ ಸತ್ಯಜೀತ ಗಿರಿ, ಸದಸ್ಯರಾದ ಯಲ್ಲಪ್ಪಾ ಮಾಲವನಕರ, ರಾಘವೇಂದ್ರ ನಾಯ್ಕ, ಚಂದ್ರಕಾಂತ ಗೋಂದಳಿ , ಸಿರಾಜ ಮುನವಳ್ಳಿ, ಅಮಿತ್ ಗೋಂದಳಿ, ಅನುಪ್ ಮಲಹೊತ್ರಾ, ಶರತ್ ಶೆಟ್ಟಿ ಇತರರು ಇದ್ದರು.