ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಅಂಕೋಲಾ(Ankola) : ಮನೆ ಮೇಲ್ಚಾವಣಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಸಿಡಿಲು ಬಡಿದು ಸಾವನ್ನಪ್ಪಿದ ಘಟನೆ ಅಂಕೋಲಾ (Ankola) ತಾಲೂಕಿನ ಉಳುವರೆ ಗ್ರಾಮದಲ್ಲಿ(Uluvare Village) ನಡೆದಿದೆ.
65 ವರ್ಷದ ತಮಾಣಿ ಅನಂತ ಗೌಡ ಮೃತ ದುರ್ದೈವಿ. ಸೋಮವಾರ ತಮ್ಮ ಮನೆಯ ಮೇಲ್ಛಾವಣಿ ದುರಸ್ಥಿ ಮಾಡುತ್ತಿದ್ದರು. ಈ ವೇಳೆ ಸಿಡಿಲು ಬಡಿದಿದ್ದರಿಂದ ಅಂಕೋಲಾ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ದೃಢ ಪಡಿಸಿದ್ದಾರೆ.
ತಮಾಣಿ ಗೌಡ ಅವರು ಶಿರೂರು ಗುಡ್ಡ ಕುಸಿತದ(Shiruru Landslide) ದುರಂತದಲ್ಲಿ ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದರು. . ಅಂದು ಬಹಿರ್ದೆಸೆಗೆ ತೆರಳಿದ್ದ ತಮಾಣಿ ಗುಡ್ಡ ಕುಸಿತದಿಂದ ಗಂಗಾವಳಿ ನದಿಯ(Gangavali River) ನೀರು ತಮ್ಮ ಮನೆಗೆ ಅಪ್ಪಳಿಸುವುದನ್ನು ಕಣ್ಣಾರೆ ಕಂಡು ಓಡಿಹೋಗಿದ್ದರಿಂದ ಅವರ ಪ್ರಾಣ ಉಳಿದಿತ್ತು.
ಆದರೆ ನಿನ್ನೆ ಸಂಜೆ ಸಿಡಿಲಿಗೆ ಪ್ರಾಣ ಕಳೆದುಕೊಂಡಿರುವುದು ದುರ್ದೈವದ ಸಂಗತಿಯಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ಓದಿ : ಮುಸುಕುಧಾರಿಗಳಿಂದ ಮಧ್ಯೆರಾತ್ರಿ ಗೋ ಕಳ್ಳತನ. ಖದೀಮರ ದೃಶ್ಯ ಕ್ಯಾಮೆರದಲ್ಲಿ ಸೆರೆ.
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ. ಕರಾವಳಿ ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ.
ಎರಡು ಮಕ್ಕಳ ತಂದೆಯೊಂದಿಗೆ ಪ್ರೇಮಾಂಕುರ. ಜೀವ ಕಳೆದುಕೊಂಡ ಧರ್ಮಸ್ಥಳ ಮೂಲದ ಏರೋಸ್ಪೆಸ್ ಎಂಜಿನಿಯರ್.