ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ದಾಂಡೇಲಿ(Dandeli) : ಸ್ಕೂಟಿಯೊಂದಕ್ಕೆ ಟ್ರ್ಯಾಕ್ಟರ್ ಡಿಕ್ಕಿ(Accident) ಹೊಡೆದ ಪರಿಣಾಮವಾಗಿ ಸ್ಕೂಟಿ ಸವಾರ ಗಂಭೀರ ಗಾಯಗೊಂಡ ಘಟನೆ ಮಂಗಳವಾರ ದಾಂಡೇಲಿ ನಗರದ(Dandeli Town) ಬರ್ಚಿ ರಸ್ತೆಯಲ್ಲಿ(Barchi Road) ನಡೆದಿದೆ.
ದಾಂಡೇಲಿಯ ಬ್ಲಾಕ್ ಕಾಂಗ್ರೆಸ್(Dandeli Block Congres) ಅಧ್ಯಕ್ಷರು ಹಾಗೂ ನಗರಸಭೆಯ ಸದಸ್ಯರಾಗಿರುವ ಮೋಹನ ಹಲವಾಯಿ ಗಂಭೀರ ಗಾಯಗೊಂಡಿದ್ದಾರೆ. ಟ್ರ್ಯಾಕ್ಟರ್ ವಾಹನ(Tractor Vechicle) ಎದುರುಗಡೆಯಿಂದ ಬಂದು ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಟ್ರ್ಯಾಕ್ಟರ್ ಅಲ್ಲೇ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೂ ಡಿಕ್ಕಿಯಾಗಿದೆ. ಈ ಘಟನೆಯಿಂದ ಮೋಹನ ಹಲವಾಯಿಯವರ ಕಣ್ಣು, ಮೂಗು, ಹಣೆ ಮತ್ತು ತಲೆಗೆ ಗಾಯವಾಗಿದೆ. ಗಾಯಗೊಂಡ ಮೋಹನ ಹಲವಾಯಿಯವರನ್ನು ತಕ್ಷಣವೇ ನಗರದ ಸಾರ್ವಜನಿಕ ಆಸ್ಪತ್ರೆಗೆ(Government Hospital) ದಾಖಲಿಸಲಾಗಿದೆ. ಸ್ಥಳಕ್ಕೆ ನಗರ ಠಾಣೆಯ(Town Station) ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಅಪಘಾತದ ಸುದ್ದಿ ತಿಳಿದು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದಾರೆ. ಗಾಯಗೊಂಡ ಮೋಹನ ಹಲವಾಯಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಧಾರವಾಡಕ್ಕೆ ರವಾನಿಸುವ ಸಾಧ್ಯತೆ ಇದೆ.
ಇದನ್ನು ಓದಿ : ಮುರ್ಡೇಶ್ವರದಲ್ಲಿ ಮಂಗಳಮುಖಿಯರಿಂದ ದರೋಡೆ : ನಾಲ್ವರ ಬಂಧನ
ಸಾರ್ವಜನಿಕರಿಗೆ ತಲೆ ನೋವಾಗಿದ್ದ ವ್ಯಕ್ತಿ ಗಡಿಪಾರು.
ಕೈಗಾದಿಂದ ಕೆಲಸ ಮುಗಿಸಿ ಬರುತ್ತಿದ್ದ ಕಾರ್ಮಿಕರ ಟೆಂಪೋ ಪಲ್ಟಿ. ಹಲವರಿಗೆ ಗಾಯ.
45 ವರ್ಷವಾದರೂ ಮದುವೆಯಾಗಿಲ್ಲ. ಚಾಕು ಇರಿದುಕೊಂಡ ಆತ್ಮತ್ಯೆಗೆ ಯತ್ನಿಸಿದ ಕಾರವಾರದ ವ್ಯಕ್ತಿ.*
ನ
	
						
							
			
			
			
			
