ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿವಮೊಗ್ಗ (Shivamogga) : ಅಪಘಾತದಲ್ಲಿ ಪತಿ ಮೃತಪಟ್ಟ ಸುದ್ದಿ ಕೇಳಿ ಮನನೊಂದು ಪತ್ನಿಯೂ ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ಹೊಸನಗರ (Hosanagara) ತಾಲೂಕಿನ ಸುತ್ತಾ ಗ್ರಾಮದಲ್ಲಿ ನಡೆದಿದೆ.
ಮೇಲಿನಬೆಸಿಗೆ ಗ್ರಾಮ ಪಂಚಾಯತಿಯ ಸುತ್ತಾ ಗ್ರಾಮದ ಶಿಳ್ಳೆಕ್ಯಾತರ ಕ್ಯಾಂಪಿನ ಮಂಜುನಾಥ (25) ಮತ್ತು ಪತ್ನಿ ಅಮೃತ (21) ಮೃತ ದುರ್ದೈವಿಗಳು.
ಮಂಜುನಾಥ್ ಡಿ. 31ರ ಸಂಜೆ ಬೈಕಿನಲ್ಲಿ ಶಿಕಾರಿಪುರಕ್ಕೆ(Shikaripura) ಹೋಗಿದ್ದಾಗ ಬೈಕ್ ಅಪಘಾತವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಬುಧವಾರ ಬೆಳಿಗ್ಗೆ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮಂಜುನಾಥ ಮೃತಪಟ್ಟಿದ್ದಾನೆ. ಸುದ್ದಿ ತಿಳಿದ ಆತನ ಪತ್ನಿ ಅಮೃತ (21) ಮನೆಯ ಶೆಡ್ಡಿನ ಜಂತಿಗೆ ತನ್ನ ವೇಲಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಅಮೃತ ಮೂಲತಃ ಮೈಸೂರು(Mysore) ವಾಸಿಯಾಗಿದ್ದ ಮೂರು ವರ್ಷದ ಹಿಂದೆ ಮಂಜುನಾಥನನ್ನ ಪ್ರೀತಿಸಿ ಕೊಲ್ಲೂರಿನಲ್ಲಿ ವಿವಾಹವಾಗಿದ್ದರು. ಘಟನೆ ವಿಷಯ ತಿಳಿದು ಹೊಸನಗರ ಪೊಲೀಸರು(Hosanagara Police) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ಓದಿ : ಗ್ರಾಮ ಪಂಚಾಯತ್ ಅಧಿಕಾರಿ ಕಿರುಕುಳಕ್ಕೆ ಸಿಬ್ಬಂದಿಗಳಿಂದ ಕೆಲಸಕ್ಕೆ ಬಹಿಷ್ಕಾರ
ಹ್ಯಾಟ್ರಿಕ್ ಹೀರೋ ಶಿವಣ್ಣ ಈಗ ಪಿಟ್.
ಕೊಲ್ಲೂರು ಮೂಕಾಂಬಿಕಾ ದೇವಾಲಯದ ಪ್ರಧಾನ ಅರ್ಚಕ ನಿಧನ.
ಹೊಸ ವರ್ಷಕ್ಕೆ ಅರ್ಧ ದಿನವೇ ಗುರಿ ದಾಟಿ ಈ ಬಾರೀ 308 ಕೋಟಿ ರೂ. ಮದ್ಯ ಮಾರಾಟ.