ಭಟ್ಕಳ(BHATKAL) : ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳ ಬೇಟೆ ಜಾಸ್ತಿಯಾಗುತ್ತಿದೆ. ಗರ್ಭಿಣಿ ಕಡವೆವೊಂದನ್ನು ಬೇಟೆಯಾಡಿ ಮಾಂಸ ಸಾಗಾಟ ಮಾಡಿದ ಘಟನೆ ತಾಲೂಕಿನ ಯಲ್ವಡಿಕವೂರ ಪಂಚಾಯತ(YALWADI KAWOORU PANCHAYAT) ವ್ಯಾಪ್ತಿಯ ಬೆಣಂದೂರು (BENANDURU) ಸಮೀಪ  ನಡೆದಿದೆ.

ದನಕರುವಿಗಾಗಿ ಮೇವು ತರಲು ಹೋಗಿದ್ದ ರೈತ ಮಹಿಯೊಬ್ಬಳು(FARMER WOMEN) ಈ ದೃಶ್ಯ ಕಂಡಿದ್ದಾಳೆ.  ಯಾರೋ ಕಾಡು ಪ್ರಾಣಿ ಬೇಟೆಗಾರರು  ಗರ್ಭಿಣಿ ಕಡವೆಯನ್ನು  ಭೇಟೆಯಾಡಿದ ಬಳಿಕ ಅದರ ತಲೆಯನ್ನು ಬೇರ್ಪಡಿಸಿ ನಂತರ ಹೊಟ್ಟೆಯಲ್ಲಿದ್ದ ಎರಡು ಭ್ರೂಣಗಳನ್ನು ಅಲ್ಲೇ ಎಸೆದು ಮಾಂಸವನ್ನು ಸಾಗಾಟ ಮಾಡಿಕೊಂಡು ಪರಾರಿಯಾಗಿದ್ದಾರೆ.

ನಂತರ ವಿಷಯ ತಿಳಿದ ಸ್ಥಳೀಯರಾದ ನಾಗೇಂದ್ರ ನಾಯ್ಕ ಹಾಗೂ ಗ್ರಾಮದ ಯುವಕರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಭಟ್ಕಳ ಅರಣ್ಯ ಇಲಾಖೆ (BHATKAL FOREST DEPARTMENT) ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನು ಓದಿ : ವಿಚಾರಣಧೀನ ಖೈದಿ ಆತ್ಮಹತ್ಯೆಗೆ ಯತ್ನ

ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಆಯುಧ ಪೂಜೆಯ ಸಂಭ್ರಮ

ಕುಣಿಕೆ ಹಾಕಿ ಜಾನುವಾರು ಕದಿಯುವ ಖದಿಮರು

ಬಾಗಾ ಬೀಚಲ್ಲಿ ಪ್ರವಾಸಿ ಬೋಟ್ ಪಲ್ಟಿ

ರತನ್ ಟಾಟಾ ನಿಧನಕ್ಕೆ ಪ್ರೇಯಸಿ ವಿದಾಯ