ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news): ಕಾರವಾರ(Karwar): ಬಿಣಗಾ ರಾ. ಹೆದ್ದಾರಿಯಲ್ಲಿ (Binaga NH) ಶನಿವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಧಾರುಣವಾಗಿ ಸಾವನ್ನಪ್ಪಿದ್ದಾರೆ.
ಡಾಂಬರ್ ಟ್ಯಾಂಕರ್(Tar Tanker) ಹರಿದ ಪರಿಣಾಮ, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದಿನಕರ ಗುನಗಿ (56) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಕಾರವಾರದ ಡಿಡಿಪಿಐ ಕಚೇರಿಯಲ್ಲಿ (Karwar DDPI Office) ದ್ವಿತೀಯ ದರ್ಜೆ ಸಹಾಯಕರಾಗಿ (SDA) ಕರ್ತವ್ಯ ನಿರ್ವಹಿಸುತ್ತಿದ್ದರೆಂದು ತಿಳಿದುಬಂದಿದೆ.
ದಿನಕರ ಅವರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ, ಕಾರವಾರದಿಂದ ಅಂಕೋಲಾ(Karwar to Ankola) ಕಡೆಗೆ ತೆರಳುತ್ತಿದ್ದ ಡಾಂಬರ್ ಟ್ಯಾಂಕರ್ ಬೈಕ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ದಿನಕರ ಅವರ ತಲೆಯ ಮೇಲೆಯೇ ಹರಿದುಹೋಗಿದೆ.
ಅಪಘಾತ ಸಂಭವಿಸುತ್ತಿದ್ದಂತೆಯೇ ಟ್ಯಾಂಕರ್ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದ. ಕಾರವಾರ ಸಂಚಾರ ಠಾಣೆಯ ಪೊಲೀಸರು, ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಟ್ಯಾಂಕರ್ ಚಾಲಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರವಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ(Karwar Traffic Police Station) ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.
ಇದನ್ನು ಓದಿ : ಕಾರವಾರ ಪಿಕಳೆ ಆಸ್ಪತ್ರೆ ಪ್ರಕರಣ: ವಿಡಿಯೋ ವೈರಲ್ ಮಾಡಿದ ಮೂವರ ಬಂಧನ.
