ಅಂಕೋಲಾ(Ankola): ಯುವಕನೋರ್ವ ಮನನೊಂದು ಕಿರು ಸೇತುವೆಗೆ ಹಗ್ಗ ಕಟ್ಟಿ ನೇಣಿಗೆ ಶರಣಾದ (Sucide) ಘಟನೆ ಅಂಕೋಲಾ(Ankola) ತಾಲೂಕಿನ ಅವರ್ಸದಲ್ಲಿ(Aversa) ನಡೆದಿದೆ.

ಅವರ್ಸಾದ ಅಜ್ಜಪ್ಪ ಶೇಟವಾಡಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅವರ್ಸಾದ ರಾಜೇಶ ಕೃಷ್ಣ ಗಾಂವಕರ ( 20 ) ಮೃತ ದುರ್ದೈವಿ.  ಈತನು ಮೂಡಕಟ್ಟಾ – ಹಾರವಾಡ (Mudakatta-Harwad) ವ್ಯಾಪ್ತಿಯ ಕಿರು ಸೇತುವೆಗೆ(Short Bridge) ಹಗ್ಗ ಕಟ್ಟಿ ,ಕುತ್ತಿಗೆಗೆ ನೇಣು (Hang) ಬಿಗಿದುಕೊಂಡು ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹೇಳಲಾಗಿದೆ. ಸೋಮವಾರ ಬೆಳಿಗ್ಗೆ  ಸ್ಥಳೀಯರು ಗಮನಿಸಿ ಪೊಲೀಸರಿಗೆ ತಿಳಿಸಿದ್ದಾರೆ.

ಅಂಕೋಲಾ ಸಿಪಿಐ(Ankola CPI) ಚಂದ್ರಶೇಖರ ಮಠಪತಿ , ಪಿ ಎಸ್ ಐ ಸುನೀಲ್ ಹುಲ್ಗೊಳ್ಳಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ನಾಯ್ಕ ಹಾಗೂ ಸ್ಥಳೀಯರು ಸಹಕಾರದಿಂದ  ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ.

ಮೃತ ಯುವಕ ವಿಪರೀತ ಸರಾಯಿ ಕುಡಿತದ ಚಟ ಹೊಂದಿದ್ದ ಎಂದು ಕೆಲ ಸ್ಥಳೀಯರು ಮಾತನಾಡಿಕೊಂಡಿದ್ದು, ಆತ್ಮಹತ್ಯೆಗೆ  ಕಾರಣ ಏನ್ಎಂಬುದು  ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಿದೆ.

ಇದನ್ನು ಓದಿ : ಬಾಲಕನ ಜೀವ ತೆಗೆದ ಬಲೂನ್

ರಸ್ತೆ ಅಪಘಾತದಲ್ಲಿ ಯುವ ಪೊಲೀಸ್ ಅಧಿಕಾರಿ ಸಾವು

ಈಜಲು ತೆರಳಿದ ಇಬ್ಬರು ಸ್ನೇಹಿತರ ಸಾವು

ಹಸು ಹುಡುಕಲು ತೆರಳಿದ ಮೂವರು ಮಹಿಳೆಯರು ನಾಪತ್ತೆ