ಅಂಕೋಲಾ(Ankola) : ಅಡ್ಡ ಬಂದ ಜಾನುವಾರು(Cattle) ತಪ್ಪಿಸಲು ಹೋಗಿ ಕಾರೊಂದು ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಕೊಡಸಣಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ (NH 66 ) ನಡೆದಿದೆ.
ಹೊನ್ನಾವರ ಮೂಲದ(HONNAVAR Native) ಹರೀಶ ನಾಯ್ಕ (25) ಎಂಬಾತ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಕಾರಿನಲ್ಲಿದ್ದ ಇನ್ನೋರ್ವ ದಿನೇಶ ಎಂಬಾತ ಗಾಯಗೊಂಡಿದ್ದಾರೆ. ಹೊನ್ನಾವರದಿಂದ ಅಂಕೋಲಾ (Honavar to Ankola ) ಕಡೆ ಕಾರು ತೆರಳುತಿತ್ತು. ಹರೀಶ್ ಚಾಲನೆ ಮಾಡುತ್ತಿದ್ದಾರೆನ್ನಲಾಗಿದೆ.
ಕೊಡಸಣಿ ಕ್ರಾಸ್ ಬಳಿ ಜಾನುವಾರೊಂದು ಎದುರಿಗೆ ಬಂದಾಗ ಕಾರು ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದಲ್ಲಿ ಪಲ್ಟಿಯಾಗಿದೆ. ಪರಿಣಾಮ ಚಾಲಕ ಕಾರಿನಿಂದ ಕೆಳಕ್ಕೆ ಮೇಲೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಅಂಕೋಲಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡಾತನಿಗೆ ಅಂಕೋಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅಂಕೋಲಾ ಪೊಲೀಸ್ ಠಾಣಾ (Ankola Police Station) ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನು ಓದಿ : ಬಿಗ್ ಬಾಸ್ ಸ್ಪರ್ಧಿ ಸೋಲು