ಶಿರಸಿ : ಪೋಲಿಸರ ಮಿಂಚಿನ ಕಾರ್ಯಾಚರಣೆಯಲ್ಲಿ ಗಾಂಜಾ ಆರೋಪಿಯೋರ್ವ ಸಿಕ್ಕಿಬಿದ್ದಿದ್ದಾನೆ.

ಶಿರಸಿ ನಗರದ ರಾಮನಬೈಲ್ ನ ಕುಳವೆ ಕ್ರಾಸ್ ಹತ್ತಿರ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಮಾಹಿತಿ ಪಡೆದ  ಶಿರಸಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗಣೇಶನಗರದ ನಿಹಾಲ್ ಡಿಯಾಗೋ ಫರ್ನಾಂಡಿಸ್ ಬಂಧಿತ ವ್ಯಕ್ತಿ

ಇತನು ಅಕ್ರಮವಾಗಿ ಗಾಂಜಾ ಸಾಗಾಟ ಮಾಡಿಕೊಂಡು ಬಂದು ರಾಮನಬೈಲ್ ನ ಕುಳವೆ ಕ್ರಾಸ್ ಬಳಿ ಮಾರಾಟ ಮಾಡುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದಾನೆ. ಆರೋಪಿತನಿಂದ ಅಂದಾಜು 80 ಸಾವಿರ ರೂ ಮೌಲ್ಯದ  804 ಗ್ರಾಂ ಗಾಂಜಾ, 2100 ರೂ ನಗದು ಹಣ ಹಾಗೂ ಸಾಗಾಟ ಮಾಡಲು ಬೈಕ್
ಜಪ್ತಿ ಮಾಡಲಾಗಿದೆ,

ಶಿರಸಿ ಉಪ ವಿಭಾಗದ ಡಿಎಸ್ಪಿ  ಗಣೇಶ ಕೆ‌ಎಲ್ ಮತ್ತು ವೃತ್ತ ನಿರೀಕ್ಷಕ  ಶಶಿಕಾಂತ ವರ್ಮಾ ಅವರ ಮಾರ್ಗದರ್ಶನದಲ್ಲಿ ಶಿರಸಿ ನಗರ ಠಾಣೆಯ ಪಿಎಸ್ಐ ನಾಗಪ್ಪ ಬಿ ನೇತೃತ್ವದಲ್ಲಿ  ಸಿಬ್ಬಂದಿಗಳಾದ ಹನುಮಂತ ಕಬಾಡಿ, ಪ್ರಶಾಂತ ಪಾವಸ್ಕರ್, ನಾಗಪ್ಪ ಲಮಾಣಿ, ಸದ್ದಾಂ ಹುಸೇನ್, ಪ್ರವೀಣ್ ಎನ್ ರವರು ಮಿಂಚಿನ ಕಾರ್ಯಾಚರಣೆ ನಡೆಸಿದ್ದರು.   ಪಿಎಸ್ಐ ಮಹಾಂತಪ್ಪ ಕುಂಬಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.