ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಯಲ್ಲಾಪುರ (Yallapur) : ಕೆಎಸ್‌ಆರ್‌ಟಿಸಿ ಬಸ್(KSRTC Bus) ಹಾಗೂ ಕಾರಿನ(Car) ನಡುವೆ ಸಂಭವಿಸಿದ  ಅಪಘಾತದಲ್ಲಿ ಕಾರು ಚಾಲಕ ಮೃತಪಟ್ಟ ‌ಘಟನೆ  ಶಿರಸಿ – ಯಲ್ಲಾಪುರ ರಸ್ತೆಯ(Sirsi-Yallapur Road) ಬೇಡ್ತಿ ಸಮೀಪದ ಮಳಲಗಾವ್ ಬಳಿ  ನಡೆದಿದೆ.

ಕುಂದಾಪುರ ಮೂಲದ(Kundapur Native) ಮುಕೇಶ ಶೆಟ್ಟಿ ಮೃತ ದುರ್ದೈವಿಯಾಗಿದ್ದಾನೆ. ಸಿದ್ದಾಪುರದಿಂದ ಬೆಳಗಾವಿ(Siddapura to Belagavi) ಮದುವೆ ಕಾರ್ಯಕ್ರಮಕ್ಕಾಗಿ ಬಸ್  ಪ್ರಯಾಣಿಕರನ್ನು ಹೊತ್ತು ಸಾಗುತಿತ್ತು. ಯಲ್ಲಾಪುರದಿಂದ ಶಿರಸಿ(Yallapur to Sirsi) ಕಡೆ ತೆರಳುತ್ತಿದ್ದ  ಕಾರಿನ ನಡುವೆ  ಮುಖಾಮುಖಿ ಡಿಕ್ಕಿ ಸಂಭವಿಸಿದೆ.  ಪರಿಣಾಮವಾಗಿ  ಕಾರು ಚಾಲಕ ಗಂಭೀರವಾಗಿ ಗಾಯಗೊಂಡು  ಸ್ಥಳೀಯರು ತಕ್ಷಣವೇ ಅತನಿಗೆ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮೃತಪಟ್ಟಿದ್ದಾನೆ.  ಘಟನೆಯಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು,  ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ಸ್ಥಳಕ್ಕೆ  ಸಾರಿಗೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮದುವೆಗೆ ತೆರಳುತ್ತಿದ್ದ ಪ್ರಯಾಣಿಕರಿಗೆ ತೊಂದರೆ ಆಗದಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಕ್ಷಣವೇ ಬದಲಿ ಬಸ್ ವ್ಯವಸ್ಥೆ ಮಾಡಿದ್ದಾರೆಂದು ತಿಳಿದುಬಂದಿದೆ.

ಇದನ್ನು ಓದಿ : ಮಧ್ಯಪ್ರಾಚ್ಯ ಯುದ್ಧ ಭೀತಿ: ಭಟ್ಕಳದಲ್ಲಿ ಪೆಟ್ರೋಲ್ ಡಿಸೇಲ್ ಗೆ ಮುಗಿಬಿದ್ದ ಜನ

ಮಸೀದಿ ಸಮೀಪ ಬಾಂಬ್ ಸ್ಫೋಟ ಬೆದರಿಕೆ – ಭಟ್ಕಳದ ವ್ಯಕ್ತಿ ಬಂಧನ.