ಚೆನ್ನೈ(CHENNAI):  ಚೆನ್ನೈ ಹೊರವಲಯದಲ್ಲಿ ಮೈಸೂರು – ದರ್ಬಾಂಗ್ ಎಕ್ಸಪ್ರೆಸ್(MYSORE-DARBANG EXPRESS) ರೈಲು ಮತ್ತು ಸರಕು ಸಾಗಣೆ ರೈಲಿನ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ರೈಲಿನ ಮೂರು ಬೋಗಿಗಳು ಹೊತ್ತಿ ಉರಿದಿವೆ. 5 ಬೋಗಿಗಳು ಹಳಿ ತಪ್ಪಿದ ಬಗ್ಗೆ ವರದಿಯಾಗಿದೆ.

ಬೆಳಗ್ಗೆ 10.30ಕ್ಕೆ ಮೈಸೂರಿನಿಂದ ಹೊರಟಿದ್ದ ಈ ರೈಲು ದರ್ಬಾಂಗ್ ಪ್ರಯಾಣಿಸುತಿತ್ತು. ಪ್ರಯಾಣಿಕರ ರೈಲಾಗಿದ್ದು ಕವರಾಯಿಪೆಟ್ಟೈ(KAVARAIPETTAI) ಎನ್ನುವ ರೈಲು ನಿಲ್ದಾಣದಲ್ಲಿ ನಿಂತಿದ್ದ ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತದಿಂದಾಗಿ ಏಕಾಏಕಿ ರೈಲಿನಲ್ಲಿ ಬೆಂಕಿ ಹೊತ್ತಿಕೊಂಡು ಭಾರೀ ಅನಾಹುತವೇ ಸಂಭವಿಸಿದೆ. ಈ ರೈಲು ಚೆನ್ನೈನಿಂದ ಆಂಧ್ರಪ್ರದೇಶ (CHENNAI to ANDRAPRADESH) ಮಾರ್ಗವಾಗಿ ಹೋಗುವಾಗ ಅವಘಡ ಸಂಭವಿಸಿದೆ. ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಇದನ್ನು ಓದಿ : ಬೆಣಂದೂರು ಅರಣ್ಯದಲ್ಲಿ ಕಡವೆ ಬೇಟೆ ಮಾಡಿದ ಹಂತಕರು

ವಿಚಾರಣಧೀನ ಖೈದಿ ಆತ್ಮಹತ್ಯೆಗೆ ಯತ್ನ

ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಆಯುಧ ಪೂಜೆ ಸಂಭ್ರಮ

ಬಾಗಾ ಬೀಚಲ್ಲಿ ಪ್ರವಾಸಿ ಬೋಟ್ ಪಲ್ಟಿ