ಭಟ್ಕಳ(Bhatkal) : ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಭಟ್ಕಳ ನಗರ ಠಾಣೆಯ ಪೊಲೀಸರು (Bhatkal Town Police) ಹೆಡೆಮುರಿ ಕಟ್ಟಿದ್ದಾರೆ.
ರಾ ಹೆದ್ದಾರಿ 66 ರ ತೆಂಗಿನಗುಂಡಿ ಕ್ರಾಸ್(Tenginagundi Cross) ಸಮೀಪ ದಾಳಿ(Raid) ನಡೆದಿದ್ದು, ಓರ್ವ ಅರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಸೆಂಟ್ರಲ್ ಲಾಡ್ಜ್ ಹಿಂಭಾಗದ ಸಯ್ಯದ ಅಕ್ರಮ ತಂದೆ ಮಹ್ಮಮದ ಹುಸೇನ್ (24), ಗುಲ್ಮಿಯ ಅಬ್ದುಲ್ ರೆಹಮಾನ್ ತಂದೆ ಸಲಿಂ ಶಾಬ್ ಶೇಖ್(27), ಶಿರಸಿಯ ಕಾರು ಚಾಲಕ ಅಜರುದ್ದೀನ್ ತಂದೆ ಮೆಹಬೂಬ್ ಶಾಬ್ ಬಂಧಿತರಾಗಿದ್ದಾರೆ. ಉಸ್ಮನ ನಗರ 2 ಕ್ರಾಸ್ ನಿವಾಸಿ ಖಾಸಿಂ ತಂದೆ ಅಬುಮಹ್ಮಮದ್ ನಾಪತ್ತೆಯಾಗಿದ್ದಾನೆ.
ಇವರು ಒರಿಸ್ಸಾದಿಂದ ಹೊನ್ನಾವರ (Orissa to Honnavar) ಕಡೆಯಿಂದ ಭಟ್ಕಳಕ್ಕೆ ಹುಂಡೈ (Hundai) ಕಂಪನಿಯ ಕಾರಿನ (Car) ಮೂಲಕ ಗಾಂಜಾ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಭಟ್ಕಳ ನಗರ ಠಾಣೆಯ ಪಿಎಸ್.ಐ. ನವೀನ ಎಸ್ ನಾಯ್ಕ ತಂಡದೊಂದಿಗೆ ತೆಂಗಿನಗುಂಡಿ ಕ್ರಾಸ್ ಸಮೀಪ ಕಾರು ತಡೆದು 4 ಲಕ್ಷ 50 ಸಾವಿರ ಮೌಲ್ಯದ 9 ಕೆಜಿ 170 ಗ್ರಾಂನ ಗಾಂಜಾ ಮತ್ತು ಹುಂಡೈ ಕಂಪನಿಯ(Hundai) ಕಾರನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಎಂ ನಾರಾಯಣ್ ಹಾಗೂ ಜಿಲ್ಲಾ ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿಗಳಾದ ಸಿ ಟಿ ಜಯಕುಮಾರ ಮತ್ತು ಜಗದೀಶ ಎಂ ಮಾರ್ಗದರ್ಶನದಲ್ಲಿ ಭಟ್ಕಳ ಡಿವೈಎಸ್ಪಿ ಮಹೇಶ ಎಂ ಕೆ ಮತ್ತು ಶಹರ ಠಾಣೆಯ ಪೊಲೀಸ್ ನಿರೀಕ್ಷಕರಾದ ಗೋಪಿಕೃಷ್ಣ ಕೆ ಆರ್ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಭಟ್ಕಳ ಶಹರ ಪೊಲೀಸ್ ಠಾಣೆಯ ಎ ಎಸ್.ಐ ಗೋಪಾಲ ನಾಯ್ಕ, ಸಿಬ್ಬಂದಿಗಳಾದ ಜಯರಾಮ್ ಹೊಸಕಟ್ಟೆ, ಉದಯ ನಾಯ್ಕ್ರ ಗಿರೀಶ್ ಅಂಕೋಲೆಕರ್, ಮಹಾಂತೇಶ ಹಿರೇಮಠ, ಕಾಶಿನಾಥ ಗೊಟಗುಣಸಿ, ಮಹಾಂತೇಶ ಪೆಮಾರ್, ದೀಪಕ ನಾಯ್ಕ , ಮದಾರಸಾಬ ಚಿಕ್ಕೇರಿ, ಕಿರಣ ಪಾಟೀಲ ಹಾಗೂ ಚಾಲಕ ಜಗದೀಶ ನಾಯ್ಕ ಕಾರ್ಯಾಚರಣೆಯಲ್ಲಿ ಇದ್ದರು.
ಈ ಬಗ್ಗೆ ಭಟ್ಕಳ ನಗರ ಠಾಣೆ ಪಿ ಎಸ್ ಐ ನವೀನ ನಾಯ್ಕ ಪ್ರಕರಣ ದಾಖಲಿಸಿದ್ದು. ಪ್ರಕರಣ ದಾಖಲಿಸಿಕೊಂಡ ಪಿ ಎಸ್ ಐ ಶಿವಾನಂದ ನಾವಂದಗಿ ತನಿಖೆ ಕೈಗೊಂಡಿದ್ದಾರೆ.
ಇದನ್ನು ಓದಿ : ಕಾಲಿಗೆ ರಿಂಗ್, ಬೆನ್ನಿಗೆ ಯಂತ್ರ ಹೊತ್ತು ತಂದ ಪಕ್ಷಿ ಆತಂಕ
ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರಿಯಿಂದ ಎಂಜಲು