ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ದಾಂಡೇಲಿ(Dandeli) : ತಾಲೂಕಿನ ಕುಳಗಿ ಗ್ರಾಮದಲ್ಲಿ(Kulagi Village) ಸಂಭವಿಸಿದ ತೀವ್ರ ರಸ್ತೆ ಅಪಘಾತದಲ್ಲಿ ಸ್ಕೂಟಿ ಸವಾರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಮೃತ ವ್ಯಕ್ತಿಯನ್ನು ಕುಳಗಿ ಗ್ರಾಮದ ನಿವಾಸಿ ಭಾಷಾ ಸಾಬ್ ಸನದಿ (ವಯಸ್ಸು 50) ಎಂದು ಗುರುತಿಸಲಾಗಿದೆ. ದಾಂಡೇಲಿಯಿಂದ ಕುಳಗಿ(Dandeli to Kulagi) ಕಡೆಗೆ ಸ್ಕೂಟಿಯಲ್ಲಿ ಹೋಗುತ್ತಿದ್ದ ವೇಳೆ, ದಾರಿಯಲ್ಲಿ ಅಚನಾಕ್ ಆಗಿ ಎಮ್ಮೆಯೊಂದು ಅಡ್ಡ ಬಂದ ಪರಿಣಾಮ, ಸ್ಕೂಟಿಯ ನಿಯಂತ್ರಣ ತಪ್ಪಿ ಎಮ್ಮೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಭಾಷಾ ಸಾಬ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು  ತಿಳಿದು ಬಂದಿದೆ.

ಘಟನೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣಾ(Dandeli Rural Police Station) ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನು ಓದಿ : ಪ್ರವಾಸಿಗರ ಸೆಲ್ಫಿ ಕ್ರೇಜಿಗೆ ಬಲಿ