ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ರಾಷ್ಟ್ರೀಯ ಹೆದ್ದಾರಿ 66(NH66) ಆರ್ ಟಿ ಓ ಕಚೇರಿಯ(RTO) ಬಳಿ ಬೈಕ್ ಹಾಗೂ ಸ್ಕೂಟಿ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಓರ್ವ ಸ್ಥಳದಲ್ಲಿ ಮೃತಪಟ್ಟಿದ್ದಾನೆ.
ಚಿರಂಜೀವ್ ಬೃಹ್ಮಾನಂದ ಕುಂಜಿ(15) ಮೃತ ದುರ್ದೈವಿ. ಮೃತ ಯಲ್ಲಾಪುರ ತಾಲೂಕಿನ ಇಡಗುಂದಿಯ ನಿವಾಸಿ. ಬಾಲಕ ತನ್ನ ತಾಯಿಯೊಂದಿಗೆ ಸ್ಕೂಟಿಯಲ್ಲಿ ಕಾರವಾರ ಕಡೆ ಬರುತ್ತಿದ್ದಾಗ ಹಿಂಬದಿಯಿಂದ ಬುಲೆಟ್ ಬೈಕ್(Bullet Bike) ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಓರ್ವ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಬುಲೆಟ್ ಮೇಲಿದ್ದ ಇಬ್ಬರು ಮೆಡಿಕಲ್ ವಿದ್ಯಾರ್ಥಿಗಳು(Medical Students) ಗಾಯಗೊಂಡಿದ್ದಾರೆ. ಇದರಲ್ಲಿ ಓರ್ವನ ಸ್ಥಿತಿ ಚಿಂತಾಜನಕವಾಗಿದೆ.
ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಅಂಬುಲೆನ್ಸ್(Ambulance) ಮೂಲಕ ಮೃತದೇಹ ಹಾಗೂ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಕಾರವಾರ ಸಂಚಾರ ಪೊಲೀಸ್ ಠಾಣೆಯಲ್ಲಿ(Karwar Traffic Station) ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ಶಾಸಕ ಸತೀಶ್ ಸೈಲ್ ಗೆ ಕೊಂಚ ರಿಲೀಫ್. ಹೈಕೋರ್ಟ್ ನಿಂದ ಜಾಮೀನು ವಿಸ್ತರಣೆ
ಕಾಳಿ ಹುಲಿ ಸಂರಕ್ಷಿತ ಅರಣ್ಯದಲ್ಲಿ ಹೆಸ್ಕಾಂ ಅಧಿಕಾರಿ ನೇಣಿಗೆ ಶರಣು
ಗ್ರಾಹಕರಿಗೆ ವಂಚಿಸಿದ ವಂಚಕರು ಪೊಲೀಸರ ಬಲೆಗೆ. ಭಟ್ಕಳದಲ್ಲಿ ಮೂವರಿಗೆ ಡ್ರಿಲ್.

