ಕುಮಟಾ(KUMTA) : ತಾಲೂಕಿನ ಗೋಕರ್ಣದ (GOKARN)ಪ್ರವಾಸಿ ತಾಣ ಕುಡ್ಲೇ ಕಡಲಲ್ಲಿ (KUDLE BEACH) ಮುಳುಗುತಿದ್ದ ವ್ಯಕ್ತಿಯೋರ್ವನನ್ನ ಲೈಫ್ ಗಾರ್ಡ್ ಸಿಬ್ಬಂದಿಗಳು(LIFE GUARD) ರಕ್ಷಣೆ ಮಾಡಿದ ಘಟನೆ ನಡೆದಿದೆ.

ಉತ್ತರಪ್ರದೇಶ(UTTARPRADESH) ರಾಜ್ಯದ ಬನಾರಸ್(BANARAS) ಮೂಲದ ರಾಹುಲ್ ಕುಮಾರ್ (28) ಎಂಬಾತನ ರಕ್ಷಣೆಗೊಳಗಾದವನಾಗಿದ್ದಾನೆ.

ಈತ ರಾಮಕಥಾ (RAMAKATHA) ಕೇಳಲು ಗೋಕರ್ಣಕ್ಕೆ ಬಂದಿದ್ದ ಎನ್ನಲಾಗಿದೆ. ಕುಡ್ಲೆ ಕಡಲತೀರ ಕಂಡು ಈಜುವ ಮನಸ್ಸಾಗಿ ಸಮುದ್ರಕ್ಕೆ ಇಳಿದಿದ್ದಾನೆ. ಸಮುದ್ರದ ಸುಳಿಗೆ ಸಿಲುಕಿ ಅಪಾಯದಂಚಿನಲ್ಲಿದ್ದ ಸ್ಥಳಕ್ಕೆ ಧಾವಿಸಿದ ಲೈಫ್ ಗಾರ್ಡ್ ಸಿಬ್ಬಂದಿಗಳಾದ ಮಂಜುನಾಥ ಹರಿಕಂತ್ರ, ಪ್ರದೀಪ್ ಅಂಬಿಗ್ ಮತ್ತು ಮಿಸ್ಟೇಕ್ ಗೋಕರ್ಣ ಅಡ್ವೆಂಚರ್ಸ್ ಸಿಬ್ಬಂದಿಗಳು ಜೆಟ್ ಸ್ಕಿ ಮೂಲಕ ಸ್ಥಳಕ್ಕೆ ಧಾವಿಸಿದ್ದಾರೆ.

ನೀರಿನಲ್ಲಿ ಮುಳುಗುತ್ತಿದ್ದ ಯುವಕನನ್ನ ರಕ್ಷಿಸಿ ದಡಕ್ಕೆ ಕರೆ ತಂದಿದ್ದಾರೆ. ಗೋಕರ್ಣ ಪೊಲೀಸ್ ಠಾಣಾ (GOKARN POLICE STATION) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನು ಓದಿ : ಕಾರವಾರದಲ್ಲಿ ಅಪಘಾತ. ಏರ್ ಬ್ಯಾಗ್ ಉಳಿಸಿತು ಜೀವ

ಬ್ಲಾಕ್ ಮೆಲ್ ಉದ್ಯಮಿ ಆತ್ಮ*ತ್ಯೆ

ಮುರ್ಡೇಶ್ವರದಲ್ಲಿ ಬೀಚ್ ಬಂದ್ ಮಾಡಿದ ಅಧಿಕಾರಿಗಳು