ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಸುರತ್ಕಲ್(Suratkal) : ಟಿಪ್ಪರ್ ಲಾರಿಯ ಚಕ್ರಕ್ಕೆ ಸಿಲುಕಿ ಬೈಕ್ ನಲ್ಲಿ ತೆರಳುತ್ತಿದ್ದ ಯುವತಿಯೋರ್ವಳು ಸಾವನ್ನಪ್ಪಿದ ಘಟನೆ ಎಂ.ಆರ್.ಪಿ.ಎಲ್.(MRPL) ಕಾರ್ಗೋ ಗೇಟ್ ಬಳಿ ಸಂಭವಿಸಿದೆ.
ಉತ್ತರಕನ್ನಡ ಮೂಲದ(Uttarakannada Native) ಹಾಲಿ ಕಾಟಿಪಳ್ಳ ಕೈಕಂಬ(Katipalla Kaikamba) ನಿವಾಸಿ ಶ್ವೇತಾ (20) ಮೃತ ದುರ್ದೈವಿಯಾಗಿದ್ದಾರೆ. ಅವರ ಸಹೋದರ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಶ್ವೇತಾ ತನ್ನ ಸಹೋದರನ ಬೈಕ್ ನಲ್ಲಿ ಕಾಟಿಪಳ್ಳ ಕೈಕಂಬದಿಂದ ಸುರತ್ಕಲ್(Suratkal) ಕಡೆಗೆ ತೆರಳುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬರುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮವಾಗಿ ಅಡಿಬದಿಯಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ. ಪರಿಣಾಮವಾಗಿ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಘಟನೆ ನಡೆಯುತ್ತಿದ್ದಂತೆ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು(Mangalore North Traffic Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಸುರತ್ಕಲ್ – ಕಾನ- ಕಾಟಿಪಳ್ಳ ಕೈಕಂಬ ರಸ್ತೆಯಲ್ಲಿ ಎರಡೂ ಬದಿಗಳಲ್ಲಿ ಗ್ಯಾಸ್ ಬುಲೆಟ್ ಟ್ಯಾಂಕರ್ ಗಳನ್ನು ನಿಲ್ಲಿಸುತ್ತಿರುವುದರಿಂದ ರಸ್ತೆ ಇಕ್ಕಟ್ಟಾಗಿ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದರಿಂದಾಗಿಯೇ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಬುಲೆಟ್ ಟ್ಯಾಂಕರ್ ಗಳ ನಿಲುಗಡೆಗೆ ಸುಸಜ್ಜಿತ ಮೈದಾನಗಳಿದ್ದರೂ ಚಾಲಕರು ರಸ್ತೆ ಬದಿ ಎಲ್ಲೆಂದರಲ್ಲಿ ನಿಲ್ಲಿಸಿ ಹೋಗುತ್ತಿದ್ದಾರೆ. ಇದರಿಂದ ರಸ್ತೆ ಇಕ್ಕಟ್ಟಾಗಿ ಸಂಚಾರ ದುಸ್ತರವಾಗುತ್ತಿದೆ. ಅಲ್ಲದೆ, ಬೃಹತಾಕಾರದ ಲಾರಿಗಳು ರಸ್ತೆ ಬದಿ ನಿಲ್ಲುವುದರಿಂದ ಎದುರಿನಲ್ಲಿ ಸಂಚರಿಸುವ ಸಣ್ಣವಾಹನಗಳು ಚಾಲಕರಿಗೆ ಗೋಚರಿಸುವುದಿಲ್ಲ. ಪಾರ್ಕಿಂಗ್ ಗೆ ಅವಕಾಶಗಳಿದ್ದರೂ ರಸ್ತೆ ಬದಿ ನಿಲ್ಲಿಸಿ ಅನೇಕ ಅಪಘಾತಗಳಿಗೆ ಕಾರಣವಾಗುತ್ತಿರುವ ಬುಲೆಟ್ ಟ್ಯಾಂಕರ್ ಲಾರಿಗಳ ಮೇಲೆ ಮಂಗಳೂರು ಸಂಚಾರ ಪೊಲೀಸರು ಸೂಕ್ತ ಕ್ರಮವಹಿಸಬೇಕು. ರಸ್ತೆ ಬದಿ ಲಾರಿಗಳ ನಿಲುಗಡೆಗೆ ನಿಷೇಧ ಹೇರಬೇಕು ಎಂದು ನಾಗರೀಕರು ಒತ್ತಾಯಿಸಿದ್ದಾರೆ.
ಇದನ್ನು ಓದಿ : ಪ್ರೀತಿಸಿ ನಾಲ್ಕು ತಿಂಗಳ ಹಿಂದಷ್ಟೆ ಮದುವೆಯಾಗಿದ್ದ ಯುವತಿ ಆ* ತ್ಯೆ. ತನಿಖೆಗೆ ಪೋಷಕರ ಒತ್ತಾಯ.
ಸಿಎಂ ಮೇಲೆ ಅಪರಿಚಿತ ವ್ಯಕ್ತಿಯಿಂದ ಹಲ್ಲೆಗೆ ಯತ್ನ. ಪೊಲೀಸರ ವಶಕ್ಕೆ.
/
	
						
							
			
			
			
			
