ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ(Karwar): ಪುಣೆಯ(Pune) ಪ್ರತಿಷ್ಠಿತ ಡಾ. ಡಿ.ವೈ. ಪಾಟೀಲ ವಿದ್ಯಾಪೀಠದ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ ನಡೆಸಿದ ಡಾಕ್ಟರ್ ಆಫ್ ಮೆಡಿಸಿನ್ (ಎಂಡಿ) ಪರೀಕ್ಷೆಯಲ್ಲಿ ವಿಶ್ವವಿದ್ಯಾಲಯಕ್ಕೆ ಕಾರವಾರದ  ಪ್ರತಿಭೆ ಮಧುರಾ ಎಂ. ನಾಯಕ  ದ್ವಿತೀಯ ರ್ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿ(Achievement) ತಂದಿದ್ದಾರೆ.

ಮಧುರಾ ಅವರ ಈ ಸಾಧನೆಗೆ ಅವರ ಕಠಿಣ ಪರಿಶ್ರಮ ಮತ್ತು ಏಕಾಗ್ರತೆ ಕಾರಣವಾಗಿದೆ.  ತಮ್ಮ ಬ್ಯಾಚುಲರ್ ಆಫ್ ಹೋಮಿಯೋಪಥಿಕ್ ಮೆಡಿಸಿನ್ ಮತ್ತು ಸರ್ಜರಿ (ಬಿಎಚ್‌ಎಂಎಸ್) ಪದವಿಯನ್ನು ಮಂಗಳೂರಿನ ಖ್ಯಾತ ಫಾದರ್ ಮುಲ್ಲರ್ ಕಾಲೇಜಿನಲ್ಲಿ(Father Muller College) ಯಶಸ್ವಿಯಾಗಿ ಪೂರೈಸಿದ್ದರು. ಅದಕ್ಕೂ ಮೊದಲು, ತಮ್ಮ ಪ್ರೌಢಶಿಕ್ಷಣವನ್ನು ಕಾರವಾರದ ಮಾತಾ ಅಮೃತಮಯಿ(Mata Amrut amayi) ಶಾಲೆಯಲ್ಲಿ ಮತ್ತು ದ್ವಿತೀಯ ಪಿಯುಸಿಯನ್ನು ನಗರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಪೂರ್ಣಗೊಳಿಸಿದ್ದರು.

ಸದ್ಯ, ಎಂಡಿ ತೇರ್ಗಡೆಯಾದ ಮಧುರಾ ಅವರಿಗೆ ಕಾಲೇಜಿನಲ್ಲಿ ಆಯೋಜಿಸಿದ್ದ ಭವ್ಯ ಪದವಿ ಪ್ರದಾನ ಸಮಾರಂಭದಲ್ಲಿ ಪ್ರಿನ್ಸಿಪಾಲ್ ಡಿ.ಬಿ. ಶರ್ಮಾ ಅವರು ಗೌರವಪೂರ್ವಕವಾಗಿ ಪದವಿ ಪ್ರದಾನ ಮಾಡಿದರು. ಮಧುರಾ ಅವರು ನಗರದ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿರುವ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಅವರ ಪುತ್ರಿಯಾಗಿದ್ದು, ಅವರ ಸಾಧನೆಗೆ ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ಮಾರ್ಗದರ್ಶಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಮಧುರಾ ಅವರ ಈ ಸಾಧನೆ, ಹೋಮಿಯೋಪಥಿ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುವ ಅನೇಕ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ.

ಇದನ್ನು ಓದಿ : ಜಿಲ್ಲಾಧಿಕಾರಿ ಹೆಸರಲ್ಲಿ ಫೇಸ್ಬುಕ್ ನಕಲಿ ಖಾತೆ. ಎಚ್ಚರ..ಎಚ್ಚರ.

ಶ್ವಾನವನ್ನ  ಬೈಕ್ ಗೆ ಕಟ್ಟಿ ದರದರನೇ ಎಳೆದೋಯ್ದ ಭೂಪ. ಪೊಲೀಸರಿಂದ ಸೋಮೊಟೊ ಪ್ರಕರಣ.

ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ. ನಾಲ್ವರಿಗೆ ಗಾಯ