ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಕಾರವಾರ(Karwar) ಮೈಸೂರು ದಸರಾ(Mysore Dasara) ಮಹೋತ್ಸವದ ಅಂಗವಾಗಿ ನಡರದ ಜಲಸಾಹಸ ಕ್ರೀಡೆಗಳಲ್ಲಿ ಕಾರವಾರದ ಸ್ಪರ್ದಿಗಳು ಸಾಧನೆ ಮಾಡಿದ್ದಾರೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜೇತ್ನ (ಜನರಲ್ ತಿಮ್ಮಯ್ಯ ಸಾಹಸ ಕ್ರೀಡೆ ಅಕಾಡೆಮಿ) ಸಹಯೋಗದಲ್ಲಿ ಶ್ರೀರಂಗಪಟ್ಟಣ ಮಯೂರ ಯಾತ್ರಿನಿವಾಸ್ ಬಳಿಯ ಕಾವೇರಿ ನದಿಯಲ್ಲಿ ಜಲ ಸಾಹಸ ಕ್ರೀಡೆಗಳಾದ ಕಯಾಕಿಂಗ್ ಹಾಗೂ ರಿವರ್ ರಾಫ್ಟಿಂಗ್ ಸ್ಪರ್ಧೆಗಳು ನಡೆಸಲಾಗಿತ್ತು.
ಕಾರವಾರದ ಸದಾಶಿವಗಡದ(Karwar Sadashivaghada) ಜಲಸಾಹಸ ಕ್ರೀಡಾ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ ಉತ್ತರ ಕನ್ನಡ(Uttarkannada) ಜಿಲ್ಲೆಯ ಕಾರವಾರ ತಂಡದ ಸ್ಪರ್ಧಿಗಳು ಅತ್ಯುತ್ತಮ ಸಾಧನೆ ತೋರಿದ್ದಾರೆ. ತರಬೇತುದಾರರಾದ ಪ್ರಕಾಶ ಹರಿಕಂತ್ರ ಅವರ ಮಾರ್ಗದರ್ಶನದಲ್ಲಿ ಕಣಕ್ಕಿಳಿದ ಕಾರವಾರದ ಪ್ರತಿಭೆಗಳು ವಿವಿಧ ವಿಭಾಗಗಳಲ್ಲಿ ಪದಕಗಳನ್ನು ಬಾಚಿಕೊಳ್ಳುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಕಾರವಾರ ತಂಡದ ವಿಜೇತರು ಮತ್ತು ಸಾಧನೆ ವಿವರ:
ವಿಶಾಕಾ ಖಾರ್ವಿ ಈಕೆಯು ಬಿಗಿನರ್ಸ್ ಅಂಡರ್-18 ಗರ್ಲ್ಸ್ ಕಯಾಕಿಂಗ್ ವಿಭಾಗದಲ್ಲಿ ಗೋಲ್ಡ್ ಹಾಗೂ ಮಹಿಳೆಯರ ರಿವರ್ ರಾಫ್ಟಿಂಗ್ ವಿಭಾಗದಲ್ಲಿ ಕಂಚು ಗಳಿಸಿದ್ದಾರೆ.
ವಿಯೋನಾ ಈಕೆಯು ಬಿಗಿನರ್ಸ್ ಅಂಡರ್-18 ಗರ್ಲ್ಸ್ ಕಯಾಕಿಂಗ್ ವಿಭಾಗದಲ್ಲಿ ಸಿಲ್ವರ್ ಹಾಗೂ ಮಹಿಳೆಯರ ರಿವರ್ ರಾಫ್ಟಿಂಗ್ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಸಾಚಿ ಈಕೆಯು ಬಿಗಿನರ್ಸ್ ಅಂಡರ್-18 ಗರ್ಲ್ಸ್ ಕಯಾಕಿಂಗ್ ವಿಭಾಗದಲ್ಲಿ ಕಂಚು ಹಾಗೂ ಮಹಿಳೆಯರ ರಿವರ್ ರಾಫ್ಟಿಂಗ್ ವಿಭಾಗದಲ್ಲಿ ಕಂಚು ಪಡೆದಿದ್ದಾರೆ.
ಮೊಹಮ್ಮದ್ ಈತನು ಬಿಗಿನರ್ಸ್ ಅಂಡರ್-18 ಬಾಯ್ಸ್ ಕಯಾಕಿಂಗ್ ವಿಭಾಗದಲ್ಲಿ ಗೋಲ್ಡ್ ಹಾಗೂ ಪುರುಷರ ರಿವರ್ ರಾಫ್ಟಿಂಗ್ ವಿಭಾಗದಲ್ಲಿ ಕಂಚು ಪದಕ ಗಳಿಸಿದ್ದಾರೆ. ಶಾನ್ ಈತನು ಬಿಗಿನರ್ಸ್ ಅಂಡರ್-18 ಬಾಯ್ಸ್ ಕಯಾಕಿಂಗ್ ವಿಭಾಗದಲ್ಲಿ ಕಂಚು ಪಡೆದಿದ್ದಾರೆ.
ಧನರಾಜ್ ಕಯಾಕಿಂಗ್ ಕ್ರಾಸ್ ಅಂಡರ್-18 ಪ್ರೊ ಬಾಯ್ಸ್ ವಿಭಾಗದಲ್ಲಿ ಗೋಲ್ಡ್ ಹಾಗೂ ಪುರುಷರ ರಿವರ್ ರಾಫ್ಟಿಂಗ್ ವಿಭಾಗದಲ್ಲಿ ಕಂಚು ಸಾಧನೆ ಮಾಡಿದ್ದಾರೆ. ವಿನೀತ್ ಕಯಾಕಿಂಗ್ ಕ್ರಾಸ್ ಅಂಡರ್-18 ಪ್ರೊ ಬಾಯ್ಸ್ ವಿಭಾಗದಲ್ಲಿ ಕಂಚು ಸಾಧನೆ ಮಾಡಿದ್ದಾರೆ.
ಪೃಥ್ವಿರಾಜ್ ಈತನು ಕಯಾಕಿಂಗ್ ಕ್ರಾಸ್ ಸೀನಿಯರ್ (ಬಾಯ್ಸ್) ಪ್ರೊ ವಿಭಾಗದಲ್ಲಿ ಸಿಲ್ವರ್ ಪದಕ ಪಡೆದಿದ್ದು, ಪುರುಷರ ರಿವರ್ ರಾಫ್ಟಿಂಗ್ ವಿಭಾಗದಲ್ಲಿ ಸಿಲ್ವರ್, ಸೇಹಾ ಕಯಾಕಿಂಗ್ ಕ್ರಾಸ್ ಅಂಡರ್-18 ಪ್ರೊ (ಗರ್ಲ್ಸ್) ವಿಭಾಗದಲ್ಲಿ ಸಿಲ್ವರ್ ಹಾಗೂ ಮಹಿಳೆಯರ ರಿವರ್ ರಾಫ್ಟಿಂಗ್ ವಿಭಾಗದಲ್ಲಿ ಕಂಚು ಪಡೆದಿದ್ದಾರೆ. ರಾಜೇಶ್ವರಿ ಬಿಗಿನರ್ಸ್ ವುಮೆನ್ ಕಯಾಕಿಂಗ್ ವಿಭಾಗದಲ್ಲಿ ಕಂಚು ಪಡೆದಿದ್ದಾರೆ.
ದೀಪಾ ಬಿಗಿನರ್ಸ್ ವುಮೆನ್ ಕಯಾಕಿಂಗ್ ವಿಭಾಗದಲ್ಲಿ ಸಿಲ್ವರ್ ಪಡೆದಿದ್ದಾರೆ. ವಿನಯ್ ಬಿಗಿನರ್ಸ್ ಮೆನ್ ಕಯಾಕಿಂಗ್ ವಿಭಾಗದಲ್ಲಿ ಕಂಚು ಪಡೆದಿದ್ದಾರೆ. ಪ್ರಸಾದ್, ಮೆಹಬೂಬ್, ಸುಮಿತ್ ಹಾಗೂ ಗುರು ಇವರು ಪುರುಷರ ರಿವರ್ ರಾಫ್ಟಿಂಗ್ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಕಂಚು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕ್ರೀಡಾಪಟುಗಳ ಈ ಹೆಮ್ಮೆಯ ಸಾಧನೆಗೆ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ನಾಯ್ಕ ಹಾಗೂ ತರಬೇತುದಾರ ಪ್ರಕಾಶ ಹರಿಕಂತ್ರ ಅವರು ಹರ್ಷ ವ್ಯಕ್ತಪಡಿಸಿ, ಎಲ್ಲಾ ವಿಜೇತ ಸ್ಪರ್ಧಿಗಳಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.