ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news): ಭಟ್ಕಳ(Bhatkal) : ತಾಲೂಕಿನ ಇತಿಹಾಸದಲ್ಲಿ ಜನತೆ ಬೆಚ್ಚಿಬೀಳುವ ಘಟನೆಯೊಂದು ನಡೆದುಹೋಗಿದೆ. ಶಿರಾಲಿಯ ತಟ್ಟೆಹಕ್ಕಲು(Shirali Tattihalka) ಸಮೀಪದ ವೆಂಕಟಾಪುರ ನದಿಯಲ್ಲಿ(Venkatapura River) ಮೃತಪಟ್ಟ ಹನ್ನೊಂದು ಅಮಾಯಕ ಜೀವಗಳು ಪಂಚಭೂತಗಳಲ್ಲಿ ಲೀನರಾಗಿದ್ದಾರೆ.
ಹಿಂದೆಂದು ಆಗದ ದುರಂತದಿಂದ ಭಟ್ಕಳ(Tragedy in Bhatkal) ಜನತೆ ಕಣ್ಣೀರಿನಲ್ಲಿ ಮುಳುಗಿದ್ದಾರೆ. ನದಿಯಲ್ಲಿ ಕಪ್ಪೆಚಿಪ್ಪು(Shellfish) ತೆಗೆಯುವ ಪ್ರವೃತ್ತಿಯಾಗಿಟ್ಟುಕೊಂಡು ಜೀವನ ನಡೆಸಿಕೊಂಡು ಬಂದಿದ್ದ ಕುಟುಂಬಗಳು ವಿಧಿಯ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಒಂದೇ ಕುಟುಂಬದ ಎಂಟು ಮಂದಿ ಸೇರಿ ಒಟ್ಟು ಹನ್ನೊಂದು ಮಂದಿ ನೀರಿನ ಸೆಳೆತಕ್ಕೆ ಸಾವನ್ನಪ್ಪಿದ್ದರು.
ಬೆಳಿಗ್ಗೆ ಎನ್ಡಿಆರ್ಎಪ್(NDRF) , ಮುಳುಗು ತಜ್ಞ(Divers) ಈಶ್ವರ ಮಲ್ಪೆ(Eshwar Malpe), ಗಂಗೊಳ್ಳಿಯ ದಿನೇಶ ಖಾರ್ವಿ ನೇತೃತ್ವದ ತಂಡದಿಂದಲೂ ಶೋಧ ಕಾರ್ಯಾಚರಣೆ(Search Operation) ನಡೆಸಲಾಯಿತು. ಕಾರ್ಯಾಚರಣೆ ನಡೆಸಿದ ತಾಸಿನಲ್ಲಿಯೇ ಮಾದೇವ ನಾಯ್ಕ ಅವರ ಶವ ಪತ್ತೆ ಯಾಯಿತು.
ಮಾಲತಿ ಜಟ್ಟಪ್ಪ ನಾಯ್ಕ (40), ಲಕ್ಷ್ಮೀ ಮಾದೇವ ನಾಯ್ಕ (40), ಲಕ್ಷ್ಮೀ ಶಿವರಾಮ ನಾಯ್ಕ (40), ಲಕ್ಷ್ಮೀ ಅಣ್ಣಪ್ಪ ನಾಯ್ಕ (50), ಉಮೇಶ ಮಂಜುನಾಥ ನಾಯ್ಕ (25), ಲಕ್ಮೀ ಮಾದೇವ ನಾಯ್ಕ (40), ಜ್ಯೋತಿ ನಾಗಪ್ಪ ನಾಯ್ಕ(38), ಮಾಸ್ತಮ್ಮ ಮಂಜುನಾಥ ನಾಯ್ಕ (45), ಮಾದೇವ ಬೈರಪ್ಪ ನಾಯ್ಕ , ಮಂಜಮ್ಮ ಗೋಯ್ದ ನಾಯ್ಕ (40), ನಾಗರತ್ನ ಪರಮೇಶ್ವರ ನಾಯ್ಕ ಹೆಣ್ಣು (38) ಮೃತ ದುರ್ದೈವಿಗಳಾಗಿದ್ದಾರೆ.
ದುರ್ಘಟನೆಯಲ್ಲಿ ಮಾದೇವಿ ಮಂಜುನಾಥ ನಾಯ್ಕ (60), ಲತಾ ಜಗದೀಶ ನಾಯ್ಕ (38) ಹಾಗೂ ನಾಗರತ್ನ ಈಶ್ವರ ನಾಯ್ಕ (40) ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಂದೇ ಕುಟುಂಬದ ಹನ್ನೊಂದು ಜನರ ಸಾವು ಕುಟುಂಬಕ್ಕೆ ಆಘಾತ ಉಂಟುಮಾಡಿದೆ. ಮೃತದೇಹಗಳ ಸಾಮೂಹಿಕ ಅಂತ್ಯಸಂಸ್ಕಾರ ವೇಳೆ ಸಾವಿರಾರು ಜನ ಕಣ್ಣೀರಿಟ್ಟರು. ಮನೆಗಳಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ(Minister Mankal Vaidya) ಮೃತರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಕುಟುಂಬದ ಮಕ್ಕಳಿಗೆ ಶಿಕ್ಷಣದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಮೃತದೇಹಗಳಿಗೆ ಹೂವಿನ ಹಾರ ಅರ್ಪಿಸಿ ಗೌರವ ಸಲ್ಲಿಸಿದರು. ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಸಂತಾಪ ಸೂವಿಸಿದರು.
ಬಳಿಕ ವಿಧಿವಿಧಾನಗಳು ನಡೆದು ಸಾವಿರಾರು ಸಂಖ್ಯೆಯ ಗ್ರಾಮಸ್ಥರು ಮೆರವಣಿಗೆಯಲ್ಲಿ ಸಾಗಿ ಅವರವರ ಜಮೀನುಗಳಲ್ಲಿ ಅಂತ್ಯಕ್ರೀಯೆ ನಡೆಸಲಾಯಿತು.
ಇದನ್ನು ಓದಿ :
Bhatkal ಭಟ್ಕಳದಲ್ಲಿ ಮುರಿನಕಟ್ಟೆ ವಿವಾದ : ಬಿಗುವಿನ ವಾತಾವರಣ. ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಕೆ
