ಕಾರವಾರ : ಉತ್ತರಕನ್ನಡ (Uttarkannada)ಜಿಲ್ಲೆಯ ಅಂಕೋಲಾದ (ANKOLA) ಶಾಲಾ ಕಾಲೇಜುಗಳಿಗೆ ಶನಿವಾರ ಜುಲೈ ಆರರಂದು (JULY 6 ) ರಜೆ ನೀಡಲಾಗಿದೆ. ಜಿಲ್ಲಾಧಿಕಾರಿ ಅವರು ಪರಿಸ್ಥಿತಿ ಅವಲೋಕಿಸಿ ರಜೆ (HOLIDAY) ಘೋಷಣೆ  ಮಾಡಿದ್ದಾರೆ.

ಇನ್ನೂ ಕಾರವಾರ, ಭಟ್ಕಳ,  ಕುಮಟಾ ಮತ್ತು ಹೊನ್ನಾವರ ತಾಲ್ಲೂಕಿನ   ಶಾಲಾ ಕಾಲೇಜುಗಳಿಗೆ ಈಗಾಗಲೇ ರಜೆ  ಘೋಷಿಸಿದ್ದರು. ಮಳೆ ಹೆಚ್ಚಾಗಿದ್ದರಿಂದ ಶಾಲಾ ಮಕ್ಕಳ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿ  ಅವರು  ರಜೆ ಘೋಷಿಸಿ  ಆದೇಶಿಸಿದ್ದಾರೆ. ಜಿಲ್ಲೆಯಲ್ಲಿ ಜುಲೈ 9ರವರೆಗೆ ಮಳೆ ಮುಂದುವರಿಯುವ ಬಗ್ಗೆ ಹವಾಮಾನ ಇಲಾಖೆ ಈಗಾಗಲೇ ತಿಳಿಸಿತ್ತು.