ಭಟ್ಕಳ : ತಾಲೂಕಿನ ಮುಂಡಳ್ಳಿ ಮೂಲದ ಹಾಲಿ ಹೆಬಳೆ ಹೆರ್ತಾರ ಗ್ರಾಮದ  ಕಲ್ಪನಾ ಮಾಸ್ತಿ ಮೊಗೇರ  ರಾಷ್ಟ್ರೀಯ ಚಾರ್ಟರ್ಡ್ ಅಕೌಂಟಂಟ್ (ಸಿ.ಎ.) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಕಳೆದ ಮೇ ತಿಂಗಳಲ್ಲಿ ಜರುಗಿದ ಸಿಎ ಪರೀಕ್ಷೆಯನ್ನ ಕಲ್ಪನಾ ಎದುರಿಸಿದ್ದರು. 2022ರಲ್ಲಿ ಗ್ರೂಪ್ 1 ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಇದೀಗ ಗ್ರೂಪ್ 2 ಪರೀಕ್ಷೆಯಲ್ಲೂ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುವ ಮೂಲಕ ಗಮನ ಸೆಳೆದಿದ್ದಾರೆ.

ಮೂಲತಃ ಮುಂಡಳ್ಳಿ ಮೊಗೇರಕೇರಿಯವರಾದ  ಸೀತಾ ಮತ್ತು ಮಾಸ್ತಿ ಮೊಗೇರ ದಂಪತಿಯ ಪುತ್ರಿ.  ಪ್ರತಿಭಾವಂತ ವಿದ್ಯಾರ್ಥಿನಿಯಾಗಿರುವ ಕಲ್ಪನಾ ಮೊಗೇರ ಮುಂಡಳ್ಳಿ ಮೊಗೇರಕೇರಿ ಶಾಲೆಯಲ್ಲಿ ಒಂದನೇ ತರಗತಿ, ಎರಡರಿಂದ ಐದನೇ ತರಗತಿವರೆಗೆ ಹೆರ್ತಾರ ಶಾಲೆ, ಆರರಿಂದ ಏಳನೇ ತರಗತಿವರೆಗೆ ತೆಂಗಿನಗುಂಡಿ ಶಾಲೆಯಲ್ಲಿ ಓದಿದ ಕಲ್ಪನಾ ನಂತರದ ಶಿಕ್ಷಣವನ್ನ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪೂರೈಸಿದ್ದಾರೆ. 

ಈ ಹಿಂದೆ ಪಾಸಾದವರೆಲ್ಲ ಅನುಭವಿಗಳ ಸಹಾಯ ಪಡೆದು ಸಾಧಿಸಿದ್ದಾರೆ. ತಾವೂ ಸಿಎ ಪರೀಕ್ಷೆಯಲ್ಲಿ ಪಾಸಾಗಿದರ ಹಿಂದೆ ತುಂಬಾ ಶ್ರಮವಿದೆ. ತಾನು ಯಾರ ಸಹಾಯ ಪಡೆಯದೇ ಪಾಸಾಗಿರುವುದಕ್ಕೆ ಖುಷಿಯಾಗುತ್ತಿದೆ ಎಂದು ಕಲ್ಪನಾ ಹೇಳಿದ್ದಾರೆ.
ತುಂಬಾ ಬಡ ಕುಟುಂಬದಿಂದ ಬಂದ ಕಲ್ಪನಾ ಮೊಗೇರ ಸಾಧನೆಗೆ ಕುಟುಂಬದವರು ಮತ್ತು  ಮುಂಡಳ್ಳಿಯ ಮಹೇಶ ಖಾರ್ವಿ ಅಭಿನಂದನೆ ಸಲ್ಲಿಸಿದ್ದಾರೆ.