ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಕಂಟೇನರ್ ವಾಹನದಲ್ಲಿ ಸರ್ಕಾರದ ಅನ್ನಭಾಗ್ಯ ಯೋಜನೆಯ(Annabhagya Scheme) ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ  ಅಧಿಕಾರಿಗಳು ದಾಳಿ ಮಾಡಿದ ಘಟನೆ  ರಾಷ್ಟ್ರೀಯ ಹೆದ್ದಾರಿ–66 ರ ಭಟ್ಕಳದ ನೂರ ಮಸೀದಿ ಹತ್ತಿರ ನಡೆದಿದೆ.

ಖಚಿತ ಮಾಹಿತಿಯ ಆಧಾರದ ಮೇಲೆ ಆಹಾರ ನಿರೀಕ್ಷಕ ಉದಯ ದ್ಯಾಮಪ್ಪ ತಳವಾರ ಹಾಗೂ ಡಿವೈಎಸ್ಪಿ ಮಹೇಶ್ ಕೆ.ಎಂ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಈ  ವೇಳೆ 9,500 ಕೆ.ಜಿ. (ಅಂದಾಜು ಮೌಲ್ಯ ರೂ.3.23 ಲಕ್ಷ) ಪಡಿತರ ಅಕ್ಕಿಯನ್ನು(Ration Rice) ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಕಂಟೇನರ್ (KA–52 B–4877) ಮೂಲಕ ಸಾಗಿಸುತ್ತಿರುವುದು  ಗೊತ್ತಾಗಿದೆ.

ಘಟನೆಯಲ್ಲಿ ಮೊಹಮ್ಮದ್ ಸಮೀರ್ ಭಟ್ಕಳ ಎಂಬಾತನೇ ಈ ಅಕ್ರಮ ಸಾಗಾಟದ ಮುಖ್ಯ ಶಂಕಿತನೆಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಸ್ಥಳದಲ್ಲಿದ್ದ ವಾಹನದ ಚಾಲಕ ಪ್ರವೀಣ್ ಎನ್.ಆರ್. ಎಂಬಾತನನ್ನು  ಬಂಧಿಸಲಾಗಿದೆ.

ಈ ಬಗ್ಗೆ ಆಹಾರ ನಿರೀಕ್ಷಕ(Food Inspector) ಉದಯ ದ್ಯಾಮಪ್ಪ ತಳವಾರ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ(Bhatkal Town Police Station) ದೂರು ದಾಖಲಿಸಿದ್ದಾರೆ. ಪಿಎಸೈ ನವೀನ ನಾಯ್ಕ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಿದ್ದಾರೆ‌. ಪೊಲೀಸರು ಕಂಟೇನರ್ ವಾಹನ ಹಾಗೂ ಅಕ್ಕಿಯನ್ನು ವಶಪಡಿಸಿಕೊಂಡಿದ್ದು, ಪ್ರಮುಖ ಆರೋಪಿಗಳ  ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

ಇದನ್ನು ಓದಿ : ಭಟ್ಕಳದಲ್ಲಿ ಯುವಕರ ಮಾರಾಮಾರಿ

ಪಿಗ್ಮಿ‌ಸಂಗ್ರಹಕಾರರ ಬಿಪಿಎಲ್ ಕಾರ್ಡ್ ರದ್ದು ಮಾಡದಂತೆ ಮನವಿ.

ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ ಕಳ್ಳ ಮಂಡ್ಯದಲ್ಲಿ ಆರೆಸ್ಟ್.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸದಿದ್ದರೆ ರಾಜಕೀಯ ನಿವೃತ್ತಿ: ಶಾಸಕ ಸತೀಶ್ ಸೈಲ್