ಶಿರಸಿ : ತಾಲೂಕಿನ ಬಿಸಲಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಳಲಗಾಂವ ಅರಣ್ಯ ಪ್ರದೇಶದಲ್ಲಿ ಕಾಡುಕೋಣಗಳ ಹಾವಳಿ ಜಾಸ್ತಿಯಾಗಿದೆ. ರೈತರ ಬೆಳೆಗಳು ಹಾಳಾಗುತ್ತಿವೆ. ಹೀಗಾಗಿ ಬೆಳೆ ರಕ್ಷಣೆಗಾಗಿ ಅರಣ್ಯ ಇಲಾಖೆಗೆ ರೈತರು ಮನವಿ ಮಾಡಿದ್ದಾರೆ.

ಕಳೆದ ಕೆಲ ತಿಂಗಳಿಂದ ನಾಲ್ಕೈದು  ಕಾಡು ಕೋಣಗಳು ಬೀಡು ಬಿಟ್ಟಿದ್ದು ನೂರಾರು ಎಕರೆ ಪ್ರದೇಶದಲ್ಲಿ ರೈತರು ಬೆಳೆದ ಭತ್ತ, ಕಬ್ಬು, ಜೋಳ, ಅಡಿಕೆ, ಬಾಳೆ ಬೆಳೆಯನ್ನು ಹಾಳು ಮಾಡುತ್ತಿವೆ. ಇದರಿಂದ ಬೇಸತ್ತ ರೈತರು ಅರಣ್ಯ ಅಧಿಕಾರಿಗಳಿಗೆ ಕಾಡುಕೋಣ ಓಡಿಸುವಂತೆ ಒತ್ತಾಯಿಸಿದರು. ಹೀಗಾಗಿ  ಶನಿವಾರ ಅರಣ್ಯ ಅಧಿಕಾರಿ ಬೋಜು ಚೌಹಾಣ್ ನೇತೃತ್ವದಲ್ಲಿ  ಅರಣ್ಯಇಲಾಖೆ ಸಿಬ್ಬಂದಿಗಳೊಂದಿಗೆ ಕಾಡುಕೋಣ ಓಡಿಸಲು ಹೊಸ ಪ್ಲ್ಯಾನ್ ಮಾಡಿದರು. ಮಳಲಗಾಂವ ಭಾಗದ ಸಾರ್ವಜನಿಕರ ಸಹಾಯದೊಂದಿಗೆ ಕಾಡು ಕೋಣಗಳನ್ನು ಬೇರೆ ಅರಣ್ಯ ಪ್ರದೇಶಕ್ಕೆ ಓಡಿಸಲು  ಪಟಾಕಿ ಸಿಡಿಸಿ ಓಡಿಸುವ  ಕಾರ್ಯ ನಡೆಸಿದರು.

ಈ ಸಂದರ್ಭದಲ್ಲಿ ಅರಣ್ಯಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಮಳಲಗಾಂವ ಗ್ರಾಮದ ರೈತರು ಇದ್ದರು.

ಇದನ್ನು ಓದಿ : ಅನಧಿಕೃತ ರೆಸಾರ್ಟ್, ತೋಟ ತೆರವು.

ವಿದ್ಯುತ್ ದೀಪ ಕಲ್ಪಿಸಿ