ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಉಡುಪಿ(Udupi) : ಕುಖ್ಯಾತ ಅಂತರ್ ಜಿಲ್ಲಾ ಕಳ್ಳನೋರ್ವನನ್ನ ಉಡುಪಿ ಜಿಲ್ಲೆಯ ಕಾಪು ಪೊಲೀಸರು(Kapu Police) ಬಂಧಿಸಿದ್ದಾರೆ.
ಅಬೂಬಕ್ಕರ್ ಯಾನೇ ಅಬ್ದುಲ್ ಖಾದರ್ ಬಂಧಿತ ಕುಖ್ಯಾತ ಅಂತರ್ ಜಿಲ್ಲಾ ಕಳ್ಳ. ಈತ ಇತ್ತೆ ಬರ್ಪೆ ಅಬುಬಕ್ಕರ್ ಎಂದೇ ಕುಖ್ಯಾತಿಯಾಗಿದ್ದನು.
ಶಿರ್ವ ಗ್ರಾಮದ(Shirva Village) ಮಟ್ಟಾರು ರಸ್ತೆಯ ಬಳಿ ಇರುವ ಪವಿತ್ರ ಪೂಜಾರ್ತಿಯವರ ಮನೆಯಲ್ಲಿ ಕಿಟಕಿ ಹುಕ್ಸ್ ಮುರಿದು ಕಳ್ಳತನ ಮಾಡಿದ್ದ. ಬಾಗಿಲಿನ ಚಿಲಕದ ಹುಕ್ಸ್ ನ್ನು ಕಟ್ಟಿದ ಕೋಲಿನಿಂದ ಎಳೆದು ಬಾಗಿಲು ತೆಗೆದು ಮನೆಯೊಳಗೆ ನುಗ್ಗಿ ಸುಮಾರು 137 ಗ್ರಾಂ ತೂಕದ ಚಿನ್ನಾಭರಣಗಳನ್ನು (ಅಂದಾಜು ಮೌಲ್ಯ ರೂ. 12,75,000/-) ಕಳವು ಮಾಡಿದ್ದ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ(Shirva Police Station) ಪ್ರಕರಣ ದಾಖಲಾಗಿತ್ತು.
ಇದನ್ನು ಓದಿ : ಭಟ್ಕಳದಲ್ಲಿ ಮಂಗಳೂರಿನ ವ್ಯಕ್ತಿ ಬಂಧನ. ನಕಲಿ ನೋಟು ವಶಕ್ಕೆ