ಯಲ್ಲಾಪುರ(Yallapur) : ಮನೆ ಗೋಡೆ ಒಡೆದು ಒಣ ಅಡಕೆ(Arecnut) ಕದ್ದ ಕಳ್ಳನೋರ್ವನನ್ನು ಯಲ್ಲಾಪುರ ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ.
ಕಾಳಮ್ಮನಗರದ(Kalammanagar) ಮಂಜುನಾಥ ಮುನ್ನಾ ತಂದೆ ಮಹೇಶ ಸಿದ್ದಿ, (20) ಬಂಧಿತ ಆರೋಪಿಯಾಗಿದ್ದಾನೆ. ಯಾರೋ ಕಳ್ಳರು ಮನೆಯ ಹಿಂದಿನ ಗೋಡೆಯನ್ನು ಒಡೆದು ಅಡಕೆ ಕಳ್ಳತನ(Arecnut theft) ಮಾಡಿಕೊಂಡು ಹೋಗಿದ್ದಾರೆ ಎಂದು ಗೋಪಾಲಕೃಷ್ಣ ನಾಗೇಶ ಭಾಗವತ ಎಂಬುವವರು ಯಲ್ಲಾಪುರ ಠಾಣೆಯಲ್ಲಿ(Yallapur police) ದೂರು ನೀಡಿದ್ದರು. ದಿನಾಂಕ : 08-10-2024 ರಂದು ರಾತ್ರಿ B-00 ಗಂಟೆಯಿಂದ ದಿನಾಂಕ : 14-10-2024 ರಂದು ಬೆಳಿಗ್ಗೆ 07-00 ಗಂಟೆಯ ನಡುವಿನ ಅವಧಿಯಲ್ಲಿ ಸಂಬಂಧಿಸಿದ ಮನೆಯಲ್ಲಿದ್ದ ಸುಮಾರು 3.60,000 ರೂಪಾಯಿ ಬೆಲೆಬಾಳುವ ಸುಮಾರು 20 ಕ್ವಿಂಟಲ್ ಒಣ ಅಡಕೆಯನ್ನು ಯಾರೋ ಕಳ್ಳರು ಮನೆಯ ಹಿಂದಿನ ಗೋಡೆಯನ್ನು ಒಡೆದು ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ದೂರಿನಲ್ಲಿ ತಿಳಿಸಿದ್ದರು.
ಪ್ರಕರಣದಲ್ಲಿ ಆರೋಪಿತನಾದ ಮಂಜುನಾಥ ಮುನ್ನಾ ಮಹೇಶ ಸಿದ್ದಿಯನ್ನ ಪೊಲೀಸರು ವಶಕ್ಕೆ ಪಡೆದು ಕೂಲಂಕುಷವಾಗಿ ವಿಚಾರಣೆ ಮಾಡಿದಾಗ ತನ್ನ ಸಹಚರರೊಂದಿಗೆ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿತನಿಂದ ಸುಮಾರು 07 ಚೀಲದಲ್ಲಿರುವ 1 ಕ್ವಿಂಟಲ್ 92 ಕೆಜಿ,740 ಗ್ರಾಂ ಕಳ್ಳತನ ಮಾಡಿದ ಅಡಿಕೆಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಎಸ್ಪಿ ಎಮ್ ನಾರಾಯಣ, ಹೆಚ್ಚುವರಿ ಪೊಲೀಸ ಅಧೀಕ್ಷಕ ಜಗದೀಶ ಎಮ್, ಶಿರಸಿ ಡಿವೈ ಎಸ್ಪಿ ಗಣೇಶ ಕೆ.ಎಲ್ ಮಾರ್ಗದರ್ಶನದಲ್ಲಿ, ಯಲ್ಲಾಪುರ ಸಿಪಿಐ ರಮೇಶ ಹನಾಪುರ ನೇತ್ರತ್ವದಲ್ಲಿ ಪಿಎಸ್‌ಐ ಗಳಾದ ಶೇಡಬಿ ಚೌಹಾಣ, ಸಿದ್ದಪ್ಪ ಗುಡಿ, ಮಹಾವೀರ ಕಾಂಬಳೆ, ಶ್ರೀಮತಿ ನಸ್ರಿನ್ ತಾಜ್, ಹಾಗೂ ಸಿಬ್ಬಂದಿಗಳಾದ ಬಸವರಾಜ ಹಗರಿ, ಉಮೇಶ ತುಂಬರಗಿ, ಗಿರೀಶ ಲಮಾಣಿ ಆರೋಪಿತನನ್ನು ದಸ್ತಗಿರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಕರಣವನ್ನು ಪತ್ತೆ ಮಾಡಿದ ಎಲ್ಲಾ ಅಧಿಕಾರಿ ಸಿಬ್ಬಂದಿಗಳಿಗೆ ಪೋಲಿಸ್ ಅಧೀಕ್ಷಕರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.
ಇದನ್ನು ಓದಿ : ಓಟದಲ್ಲಿ ಸುದರ್ಶನ್ ತಾಂಡೇಲ್ ರನ್ನರ್ ಅಪ್