ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಮುರ್ಡೇಶ್ವರ(Murdeshwar) : ಭಟ್ಕಳತಾಲೂಕಿನ ಬೈಲೂರು ತೆಂಗಾರ(Bailuru Tengar) ಘಟನೆಗೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕರಿಗೆ ಅಮಲು ಪದಾರ್ಥವನ್ನು ನೀಡಿದ್ದ ವ್ಯಕ್ತಿಯನ್ನ ಬಂಧಿಸಲಾಗಿದೆ.
ಭಟ್ಕಳದ ಕಾರಗದ್ದೆ 2ನೇ ಕ್ರಾಸ್ ನಿವಾಸಿ ಸಿದ್ದೀಕ ಅಬ್ದುಲ್ ರೆಹಮಾನ ಸಿದ್ದಿಕ್ ಖಾದಿರ ಮೀರಾ (62) ( ಮಸ್ಕನಿ ಸಿದಿಕ್ ) ಎಂಬಾತನನ್ನು ಬಂಧಿಸಲಾಗಿದೆ.
ಕಲಂ : 29 NDPS ACT 1985 ಮತ್ತು ಕಲಂ : 77 Juvienel Justice Act 2015 ನೇ ಕಾನೂನಿನ ಅಡಿಯಲ್ಲಿ ಮುರ್ಡೇಶ್ವರ ಸಿಪಿಐ(Murdeshwar CPI) ಜಗದೀಶ್ ಹಂಚಿನಾಳ್ ಅವರು ಬಂಧಿಸಿದ್ದಾರೆ. ಬಂಧಿತದಿಂದ ಒಂದು ಇ-ಸಿಗರೇಟ್ ಪ್ಯಾಕೇಟ್ ಅದಕ್ಕೆ ತುಂಬುವ 09- ರಿಫಿಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮಾರ್ಚ್ 13 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇದನ್ನು ಓದಿ : ಜೋಯಿಡಾ ತಾಲೂಕಿನಾದ್ಯಂತ ಹೋಳಿ ಹಬ್ಬದ ನಿಮಿತ್ತ ಸುಗ್ಗಿ(ಸಿಗ್ಮೋ) ಕುಣಿತದ ಸಂಭ್ರಮ.
ಸ್ಥಳೀಯರಿಗೆ ಉದ್ಯೋಗ ನೀಡಿ. ಕೈಗಾ ಚಲೋ ಪಾದಯಾತ್ರೆ ಆರಂಭ.
ಮಾರ್ಚ್ಒಂದರಂದು ಹುತ್ತದ ದೇವತೆ ಶ್ರೀ ಗೌಳಾದೇವಿ ವಾರ್ಷಿಕ ಜಾತ್ರಾ ಮಹೋತ್ಸವ.
