ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news): ಬೆಂಗಳೂರು (Bangalore) : ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸಿದ ಹೋರಾಟ ಕೊನೆಗೂ ಯಶಸ್ವಿಯಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಆಶಾ ಕಾರ್ಯಕರ್ತೆಯರ ನಿಯೋಗದ ಜೊತೆ ಮಾತುಕತೆ ನಡೆಸಿದ ಬಳಿಕ  ಮಹತ್ವದ ಆದೇಶ ಹೊರಡಿಸಿದ್ದಾರೆ.

ಆಶಾ ಕಾರ್ಯಕರ್ತೆಯರು ತಮಗೆ ಪ್ರತಿ ತಿಂಗಳು 15,000 ರೂಪಾಯಿ ಗೌರವಧನ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಈಗ ಸರ್ಕಾರ ಇವರ ಬೇಡಿಕೆಯನ್ನು ಪರಿಗಣಿಸಿದ್ದು, ಕೂಡಲೇ ಗೌರವಧನ ಹತ್ತು ಸಾವಿರ ಹೆಚ್ಚಿಸಲು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.

ಇಷ್ಟೇ ಅಲ್ಲದೇ ಪ್ರತಿಯೊಂದು ಬೇಡಿಕೆಯನ್ನು ಹಂತಹಂತವಾಗಿ ಪರಿಶೀಲನೆ ಮಾಡುತ್ತೇವೆಂದು  ಭರವಸೆ ನೀಡಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಆಶಾ ಕಾರ್ಯಕರ್ತೆಯರು ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಧರಣಿ ನಡೆಸುತ್ತಿದ್ದರು. ಆಶಾ ಕಾರ್ಯಕರ್ತೆಯರು ಮತ್ತು  ಸರ್ಕಾರದ ಪ್ರತಿನಿಧಿಗಳ ನಡುವೆ ಹಲವು ಸುತ್ತಿನ ಮಾತುಕತೆ ವಿಫಲವಾಗಿತ್ತು. ಸಿಎಂ ಸಿದ್ದರಾಮಯ್ಯ ಅವರೇ ಖುದ್ದು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಇದನ್ನು ಓದಿ : ಹೆಗಲಿನಲ್ಲಿ ಬಂದೂಕು. ನಕ್ಸಲ್ ಕರಿನೆರಳಲ್ಲಿ ಅರಳಿದ ಲವ್ ಕಹಾನಿ.

ಉದ್ಯಮಿ ಕಿಡ್ನಾಪ್. ಹಲ್ಲೆ ಮಾಡಿ ಬೇರೊಂದು ಕಡೆ ಬಿಟ್ಟು ಓಡಿದ ಕಿಡ್ನಾಪರ್ಸ

ಹಿಂದುಸ್ತಾನವು ಎಂದು ಮರೆಯದ ಬಹುಭಾಷೆಯ ಖ್ಯಾತ ಗಾಯಕ ನಿಧನ.

ನಿಯಮ ಮೀರಿದ ಬೈಕ್ ಸವಾರನಿಗೆ ಬಿತ್ತು ಬರೋಬ್ಬರಿ ದಂಡ.