ಭಟ್ಕಳ(Bhatkal): ಮದ್ಯ ಸೇವನೆ ಮಾಡಿದಲ್ಲದೆ ಪೊಲೀಸರೊಂದಿಗೆ ಅನುಚಿತ ವರ್ತನೆ ತೋರಿದ ಬೈಕ್ ಸವಾರನಿಗೆ ಭಟ್ಕಳ ನ್ಯಾಯಾಲಯ(Bhatkal Court) ಬರೋಬ್ಬರಿ ದಂಡ ವಿಧಿಸಿದೆ.
ಡಿಸೆಂಬರ್ 31 ರಂದು ಭಟ್ಕಳ ಶಹರದ ಪಿಎಲ್ಡಿ ಬ್ಯಾಂಕ್ (PLD Bank) ಕ್ರಾಸ್ ಹತ್ತಿರ ಪಿ.ಎಸ್.ಐ. ನವೀನ್ ನಾಯ್ಕ ರವರು ವಾಹನ ತಪಾಸಣೆ ಮಾಡುತ್ತಿರುವ ವೇಳೆ ಭೋರಾಸಿಂಗ್ ಎಂಬ ವ್ಯಕ್ತಿ ಮೊಟಾರ ಸೈಕಲ್ ಮೇಲೆ ತೆರಳುತ್ತಿದ್ದ. ಈ ವೇಳೆ ಪರಿಶೀಲಿಸಿದಾಗ ಚಾಲಕನು ಮಧ್ಯ ಸೇವನೆ ಮಾಡಿದ ಬಗ್ಗೆ ದೃಡಪಟ್ಟಿತು. ಹೀಗಾಗಿ ಪ್ರಕರಣ ದಾಖಲಿಸಲಾಗಿತ್ತು.
ಮಧ್ಯ ಸೇವನೆ ಮಾಡಿ ವಾಹನ ಚಾಲನೆ, ಚಾಲನಾ ಪ್ರಮಾಣ ಪತ್ರ (Driving Licence) ಹೊಂದದೇ ಇದ್ದದ್ದು, ಅಪಾಯಕಾರಿ ಚಾಲನೆ, ಹೆಲ್ಮೆಟ್ ಧರಿಸದೇ ಇರುವುದು ಮತ್ತು ಪೊಲೀಸ್ ಅಧಿಕಾರಿಯವರೊಂದಿಗೆ ಅನುಚಿತ ವರ್ತನೆ ತೋರಿದ ಕುರಿತು ವಾಹನ ಚಾಲಕನ ವಿರುದ್ಧ ಭಟ್ಕಳದ ಪ್ರಧಾನ (ಸಿ.ಜೇ) ಹಾಗೂ ಜೇ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಚಾಲಕನ ವಿರುದ್ಧ ಅಂತಿಮ ವರದಿ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ಕೈಗೊಂಡ ನ್ಯಾಯಾಧೀಶರು ತಪ್ಪಿತಸ್ಥ ಚಾಲಕನಿಗೆ 22,500 ರೂಪಾಯಿ ದಂಡ ವಿಧಿಸಿ ಪ್ರಕರಣ ಮುಕ್ತಾಯಗೊಳಿಸಿದೆ.
ಇದನ್ನು ಓದಿ : ಶಿರಸಿಯಲ್ಲಿ ಅರಣ್ಯ ಅಧಿಕಾರಿಗಳ ದಾಳಿ. 92 ನಾಟ ಮತ್ತು ಲಾರಿ ಸೇರಿ ಇಬ್ಬರು ವಶಕ್ಕೆ
ಅರಬ್ಬೀ ಸಮುದ್ರದಲ್ಲಿ ಪಲ್ಟಿಯಾದ ದೋಣಿ. ಆಪತ್ಬಾಂಧವನಂತೆ ಬಂದ ಮಂಗಳೂರು ಮೀನುಗಾರರು