ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕುಮಟಾ(Kumts) : ಜಮೀನು ವಿಚಾರದಲ್ಲಿ ದಾಯದಿಗಳಿಬ್ಬರು ಜಗಳವಾಡಿ ಮಚ್ಚಿನಲ್ಲಿ ಹೊಡೆದಾಡಿಕೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೊರ್ಸೆಯಲ್ಲಿ ನಡೆದಿದೆ.
ಮಂಜುನಾಥ್ ನಾಯ್ಕ ಹಾಗೂ ಹನುಮಂತ ನಾಯ್ಕ ಅವರು ಜಗಳವಾಡಿಕೊಂಡವರು. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಅತಿರೇಕಕ್ಕೆ ಹೋಗಿ ಮಚ್ಚಿನಿಂದ ಹೊಡೆದಾಡಿಕೊಂಡಿದ್ದಾರೆ. ಗಲಾಟೆಯಲ್ಲಿ ಮಂಜುನಾಥ್ ನಾಯ್ಕ ತೊಡೆ, ಕೈ ಬೆರಳುಗಳಿಗೆ ಗಂಭೀರ ಗಾಯವಾಗಿದೆ. ತಕ್ಷಣ ಗಾಯಗೊಂಡ ಮಂಜುನಾಥ ನಾಯ್ಕಗೆ ಕುಮಟಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ.
ಇನ್ನೂ ಹನುಮಂತನಿಗೂ ಕೂಡ ಗಾಯವಾಗಿದ್ದು, ಕುಮಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಆಸ್ಪತ್ರೆಗೆ ರವಾನಿಸಲಾಗಿದೆ ಎನ್ನಲಾಗಿದೆ ಈ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.
ಇದನ್ನು ಓದಿ : ಕಾರವಾರದಲ್ಲಿ ರಾರಾಜಿಸಿದ ತಿರಂಗ. ಆಪರೇಷನ್ ಸಿಂಧೂರ್ ಪ್ರತಿಧ್ವನಿ.
ದರೋಡೆ ತಪ್ಪಿಸಿದ ಭಟ್ಕಳ ಪೋಲೀಸರು. ಸಿನಿಮೀಯ ರೀತಿಯಲ್ಲಿ ಗರುಡ ಗ್ಯಾಂಗ್’ನ ಮೂವರು ಆರೆಸ್ಟ್. ಇನ್ನಿಬ್ಬರು……
	
						
							
			
			
			
			
