ಕಾರವಾರ(KARWAR) : ಉತ್ತರಕನ್ನಡ ಜಿಲ್ಲೆಯ ಮೂರು ಕಡೆಗಳಲ್ಲಿ ರಾಷ್ಟ್ರೀಯ ತನಿಖಾ ದಳ ಹೆಜ್ಜೆ ಹಾಕಿದ್ದು ಮೂವರ ವಿಚಾರಣೆ ನಡೆಸಿದೆ.
ಕಾರವಾರ ತಾಲೂಕಿನ ಮುದಗಾ ನಿರಾಶ್ರಿತರ ಕಾಲೋನಿ, ತೋಡೂರು ಹಾಗೂ ಗೋಕರ್ಣದ ಹನೆಹಳ್ಳಿಯಲ್ಲಿ ಎನ್ಎಐ(NIA) ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ದಾಳಿಗೊಳಗಾದ ಮೂವರು ಸೀಬರ್ಡ್ ನೌಕಾನೆಲೆಯಲ್ಲಿ (SEABIRD NOUKANELE) ಕೆಲಸ ಮಾಡುವವರಾಗಿದ್ದು ಅತೀ ಮಹತ್ವದ ಪ್ರಕರಣ ಎಂದು ಹೇಳಲಾಗುತ್ತಿದೆ. ನೌಕಾನೆಲೆಗೆ ಸಂಬಂಧಿಸಿದ ಮಾಹಿತಿಗಳನ್ನ ಸೋರಿಕೆ ಮಾಡಿದ ಆರೋಪದ ಮೇಲೆ ಎನ್ ಎ ಐ (NIA) ಈ ದಾಳಿ ನಡೆಸಿದೆ ಎನ್ನಲಾಗಿದೆ.
ಗೌಪ್ಯ ಸ್ಥಳದಲ್ಲಿ ಮೂವರನ್ನ ವಿಚಾರಣೆ ನಡೆಸಲಾಗುತ್ತದೆ. ದಾಳಿಗೊಳಗಾದವರ ಹಿನ್ನಲೆ, ಬ್ಯಾಂಕ್ ವ್ಯವಹಾರ, ಕೌಟುಂಬಿಕ ಹಿನ್ನಲೆ, ಕೆಲಸದ ವಿವರಗಳನ್ನ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಮತ್ತು ಮೊಬೈಲ್ ಲ್ಲಿರುವ ಡಾಟಾಗಳನ್ನ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಬೆಳಿಗ್ಗೆಯಿಂದ ಇವರೆಗೆ ವಿಚಾರಣೆ ನಡೆದಿದ್ದು ಆದರೆ ನಿಖರ ಮಾಹಿತಿ ಇನ್ಮೇಲೆ ಲಭ್ಯವಾಗಬೇಕಾಗಿದೆ.
ಇದನ್ನು ಓದಿ : ಸಂತ್ರಸ್ತ ಕುಟುಂಬದವರಿಂದ ಪ್ರತಿಭಟನೆ