ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal): ಹೆದ್ದಾರಿಯಲ್ಲಿ ಸಂಚರಿಸುವವರನ್ನ ಅಡ್ಡ ಗಟ್ಟಿ ದರೋಡೆ(Robbery) ಮಾಡಲು ಮುಂದಾದ ಕುಖ್ಯಾತ `ಗರುಡ ಗ್ಯಾಂಗ್’ನ(Garuda Gang) ಮೂವರನ್ನು ಸಿನಿಮೀಯ ರೀತಿಯಲ್ಲಿ ಬಂಧಿಸುವಲ್ಲಿ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಗಳೂರಿನ ಜಲೀಲ ಹುಸೈನ್, ಭಟ್ಕಳದ ಗಾಂಧೀನಗರದ ಹೆಬಳೆಯ ನಾಶೀರ್ ಹಕಿಂ ಹಾಗೂ ಅಪ್ರಾಪ್ತ ಬಾಲಕನೊಬ್ಬ ಸಿಕ್ಕಿಬಿದ್ದಿದ್ದಾನೆ.
ಪಿಎಸ್‌ಐ ರನ್ನಗೌಡ ಪಾಟೀಲ್ ನೇತೃತ್ವದಲ್ಲಿ ಬುಧವಾರ ನಸುಕಿನ ಜಾವ ಮೂರು ಗಂಟೆಗೆ ಕಾರ್ಯಾಚರಣೆ ನಡೆಸಲಾಗಿದೆ. ಬಿಳಲಖಂಡ ಗ್ರಾಮದ ಸಾಗರ ರಸ್ತೆ(Sagar Road) ಬಳಿ ಐವರು ಕಾರಿನಲ್ಲಿ ಅಡಗಿ ಕುಳಿತಿದ್ದರು. ದರೋಡೆ ನಡೆಸಲು ಸಂಚು ರೂಪಿಸಿದ್ದರು. ಇನೋವಾ ಕಾರಿನಲ್ಲಿ(Innova Car) ಕೂತಿದ್ದ ಅವರ ಬಳಿ ಚಾಕು, ಚೂರಿ, ಕಾರಪುಡಿ ಸೇರಿ ಬಗೆ ಬಗೆಯ ವಸ್ತುಗಳನ್ನ ಹೊಂದಿದ್ದರು.
ಭಟ್ಕಳ ಗುಳ್ಮಿ ರಸ್ತೆ ಕ್ರಾಸ್(Bhatkal Gulmi Cross) ಕತ್ತಲಿನಲ್ಲಿ ಕಾರು ಇರುವುದನ್ನು ಗಮನಿಸಿದ ಭಟ್ಕಳ ಗ್ರಾಮೀಣ ಠಾಣೆ(Bhatkal Rural Station) ಪಿಎಸ್‌ಐ ರನ್ನಗೌಡ ಪಾಟೀಲ್ ವಿಚಾರಿಸಲು ಮುಂದಾದಾಗ ಡಕಾಯಿತರೆಲ್ಲರೂ ಎಸ್ಕೇಪ್ ಆಗಲು ಕಾರನ್ನು ಹಿಮ್ಮುಖವಾಗಿ ಚಲಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಈ ವೇಳೆ ಕಾರು ಗಟಾರಕ್ಕೆ ಬಿದ್ದಿದೆ. ಈ ವೇಳೆ ಕಾರಿನಲ್ಲಿದ್ದ ಭಟ್ಕಳ ಮುಗ್ಧಂ ಕಾಲೋನಿಯ ಜಿಶಾನ್, ಭಟ್ಕಳ ಬಟ್ಟಾಕಾವಿನ ನಬೀಲ್ ಓಡಿ ಪರಾರಿಯಾದರು.
ಭಟ್ಕಳ ಸಿಪಿಐ ದಿವಾಕರ್ ಪಿ ಎಂ, ಪಿಎಸ್‌ಐ ಬರಮಪ್ಪ ಬರಗಲಿ, ನವೀನ ನಾಯ್ಕ, ಶಾಂತಿನಾಥ ಪಾಸಾನೆ ಅವರು ತಮ್ಮ ಸಿಬ್ಬಂದಿ ಜೊತೆ ಆ ಇಬ್ಬರು ಡಕಾಯಿತರನ್ನು ಹಿಡಿಯುವ ಪ್ರಯತ್ನ ಮಾಡಿದರು. ಆದರೂ, ಅವರು ತಪ್ಪಿಸಿಕೊಂಡರು. ಉಳಿದ ಮೂವರನ್ನು ಹಿಡಿಯಲು ಹೋರಾಟ ನಡೆಸಿದ ಪಿಎಸ್‌ಐ ರನ್ನಗೌಡ ಪಾಟೀಲ್ ಅವರು ಪೊಲೀಸ್ ಸಿಬ್ಬಂದಿ ವಿನಾಯಕ ಪಾಟೀಲ. ಅಂಬರೀಶ ಕುಂಬಾರಿ, ವಿನೋದ ಜಿಬಿ, ಲೋಕೇಶ ಕತ್ತಿ, ನಿಂಗನಗೌಡ ಪಾಟೀಲ, ಜಗದೀಶ ನಾಯ್ಕ, ವಿಜಯ ಜಾದವ್, ದುರ್ಗೇಶ ನಾಯ್ಕ, ದೇವರಾಜ ಮೊಗೇರ್ ಜೊತೆ ಸೇರಿ ಉಳಿದ ಮೂವರಿಗೆ ಹೆಡೆಮುರಿ ಕಟ್ಟಿದ್ದಾರೆ.
ಮಂಗಳೂರಿನ(Mangalore) ಜಲೀಲ ಹುಸೈನ್ ವಿರುದ್ಧ ಈಗಾಗಲೇ ಕಳ್ಳತನ, ದರೋಡೆ ಸೇರಿ 11 ಪ್ರಕರಣಗಳಿದ್ದು ಭಟ್ಕಳದ ಪ್ರಕರಣ ಚಾಲ್ತಿಯಲ್ಲಿದ್ದವು. ಆ ಬಾಲಕನ ವಿರುದ್ಧವೂ ಒಂದು ಪ್ರಕರಣ ವಿಚಾರಣೆ ನಡೆಯುತ್ತಿದೆ. ಬಂಧಿತರಿಂದ 1500ರೂ ಹಣ, ಮೊಬೈಲ್, ಚಾಕು, ಬೆಲ್ಟು, ಖಾರದಪುಡಿ ಸೇರಿ ಅವರು ಬಳಸಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೂ ತಪ್ಪಿಸಿಕೊಂಡ ಭಟ್ಕಳ ಮುಗ್ಧಂ ಕಾಲೋನಿಯ ಜಿಶಾನ್, ಭಟ್ಕಳ ಬಟ್ಟಾಗಾವಿನ ನಬೀಲ್ ಪತ್ತೆಗೆ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ವಿಶೇಷ ತಂಡ ರಚಿಸಿದ್ದಾರೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಗದೀಶ ಎಂ, ಡಿವೈಎಸ್ಪಿ ಮಹೇಶ ಎಂ ಕೆ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದ್ದರು.
ಇದನ್ನು ಓದಿ : ಬಾರೀ ಮಳೆ ಹಿನ್ನಲೆ. ಇಂದು ಅಂಗನವಾಡಿಗಳಿಗೆ ರಜೆ ಘೋಷಣೆ.
ಕಡಲ ತೀರದಲ್ಲಿ ಹಡಗಿನ ರ್ಯಾಪ್ಟ್ ಪತ್ತೆ. ಕೊಚ್ಚಿಯಲ್ಲಿ ಮುಳುಗಿದ ಹಡಗಿನದ್ದೆಂಬ ಸಂಶಯ.