ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹೊನ್ನಾವರ(Honnavar) : ರಾತ್ರಿ ವೇಳೆಯಲ್ಲಿ ಅಕ್ರಮ ಉಸುಕು(Illegal Sand) ಸಾಗಾಟವಾಗುತ್ತಿರುವ ದೂರಿನ ಹಿನ್ನಲೆಯಲ್ಲಿ ತಪಾಸಣೆಗೆ ತೆರಳಿದ್ದ ವೇಳೆ ಕೆಲವು ವ್ಯಕ್ತಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ(Mines And geology) ಉಪನಿರ್ದೇಶಕಿ ಕಾರನ್ನು ಹಿಂಬಾಲಿಸಿದ ಘಟನೆ ನಡೆದಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಆಶಾ(Deputy Director Asha) ಅವರು ತಪಾಸಣೆಗೆ(Inspection) ಹೊರಟ ಕೆಲವೇ ಕ್ಷಣಗಳಲ್ಲಿ ಒಂದು ಕಾರು ಅವರ ವಾಹನವನ್ನು ಹಿಂಬಾಲಿಸಿದೆ. ಈ ವೇಳೆ ತಮ್ಮ ವಾಹನದಿಂದ ಇಳಿದು ಉಪನಿರ್ದೇಶಕರು ಕಾರನ್ನು ಹಿಂಬಾಲಿಸಿದ ವ್ಯಕ್ತಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ರೀತಿಯಾಗಿ ವರ್ತಿಸಿರೋದು ಸರಿಯಲ್ಲ ಎಂದಿದ್ದಾರೆ.
ತಮ್ಮ ಸುರಕ್ಷತೆಗೆ ಭೀತಿ ಉಂಟಾಗಿದೆ. ಈ ಹಿಂದೆ ಕೂಡ ಮರಳು ಸಾಗಾಟಗಾರರು(Sand Supplyers) ಅಧಿಕಾರಿಗಳ ವಾಹನಗಳನ್ನು ಹಿಂಬಾಲಿಸಿರುವ ಘಟನೆಗಳು ನಡೆದಿದ್ದವು. ಘಟನೆಗೆ ಸಂಬಂಧಿಸಿ ಆಶಾ ಅವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ(Honnavar Police Station) ದೂರು ದಾಖಲಿಸಿದ್ದಾರೆ.
ಇದನ್ನು ಓದಿ : ಕಾರವಾರದಲ್ಲಿ ಭೀಕರ ಅಪಘಾತ. ಓರ್ವನ ದುರ್ಮರಣ. ಇಬ್ಬರು ಮೆಡಿಕಲ್ ವಿದ್ಯಾರ್ಥಿಗಳು ಗಂಭೀರ.
ಶಾಸಕ ಸತೀಶ್ ಸೈಲ್ ಗೆ ಕೊಂಚ ರಿಲೀಫ್. ಹೈಕೋರ್ಟ್ ನಿಂದ ಜಾಮೀನು ವಿಸ್ತರಣೆ
ಕಾಳಿ ಹುಲಿ ಸಂರಕ್ಷಿತ ಅರಣ್ಯದಲ್ಲಿ ಹೆಸ್ಕಾಂ ಅಧಿಕಾರಿ ನೇಣಿಗೆ ಶರಣು
ಗ್ರಾಹಕರಿಗೆ ವಂಚಿಸಿದ ವಂಚಕರು ಪೊಲೀಸರ ಬಲೆಗೆ. ಭಟ್ಕಳದಲ್ಲಿ ಮೂವರಿಗೆ ಡ್ರಿಲ್.

