ಕಾರವಾರ(Karwar) : ಸದಾಶಿವಗಡ ಅಮೃತ ವಿದ್ಯಾಲಯ(Amrita Vidyalaya) ಕ್ರಿಕೆಟ್ ಅಕಾಡೆಮಿ ಕಾರವಾರ ಇವರ ಆಶ್ರಯದಲ್ಲಿ ನಡೆದ 20 ಓವರ್ ನ ರಾಜ್ಯಮಟ್ಟದ ಲೆದರ್ ಬಾಲ್ ಕ್ರಿಕೆಟ್(Leather Ball Cricket) ಪಂದ್ಯಾವಳಿಯಲ್ಲಿ ನ್ಯೂ ಹೈ ಸ್ಕೂಲ್ ಬಾಡ(New H8gh School Baad) ತಂಡವು ಫೈನಲ್ ಪಂದ್ಯದಲ್ಲಿ ಅಮೃತ ವಿದ್ಯಾಲಯ ಸದಾಶಿವಗಡ ತಂಡವನ್ನು ಏಳು ವಿಕೆಟ್ ಅಂತರದಲ್ಲಿ ಪರಾಭವಗೊಳಿಸಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಅಮೃತ ವಿದ್ಯಾಲಯ ಸದಾಶಿವಗಡ (Amrita Vidyalaya Sadashivagada) ತಂಡವು 89 ರನ್ ಕಲೆ ಹಾಕಿತು, ದಕ್ಷ ಸೈಲ್ 14 ರನ್, ನಂದನ್ ಎಚ್ 13 ರನ್, ಸುದರ್ಶನ್ ಎನ್ 12 ರನ್ ಗಳಿಸಿ ಒಟ್ಟಾರೆಯಾಗಿ ನ್ಯೂ ಹೈ ಸ್ಕೂಲ್ ಬಾಡ ತಂಡದ ಮಾರಕ ಬೌಲಿಂಗ್ ಗೆ ತತ್ತರಿಸಿ 89 ರನ್ ಮಾಡಿ 90 ರನ್ ಟಾರ್ಗೆಟ್ ನೀಡಿತು. ಪಂದ್ಯದಲ್ಲಿ ಗಜಾನನ ಲೋಣೇಕರ್ 3 ವಿಕೆಟ್ ಶ್ರೀಯಾನ್ ಲಾಂಜೆಕರ್ 2 ವಿಕೆಟ್ ಅನಿಲಕುಮಾರ್ ವಡ್ಡರ್ 2 ವಿಕೆಟ್ ಪಡೆದುಕೊಂಡರು.
90 ರನ್ ಗುರಿಯನ್ನ ಬೆನ್ನತ್ತಿದ ನ್ಯೂ ಹೈ ಸ್ಕೂಲ್ ತಂಡದ ಗಜಾನನ್ ಲೋಣೇಕರ್ 44 ರನ್, ಅನಿಲ್ ಕುಮಾರ್ ವಡ್ಡಾರ್ 22 ರನ್, ಶ್ರೀಧರ್ 12 ರನ್ ಗಳಿಸಿ ಮೂರು ವಿಕೆಟ್ ನಷ್ಟಕ್ಕೆ 92 ರನ್ ಗಳಿಸಲು ಯಶಸ್ವಿಯಾಯಿತು. 7 ವಿಕೆಟ್ ನಿಂದ ಪಂದ್ಯವನ್ನು ಗೆಲ್ಲುವ ಮೂಲಕ ಈ ವರ್ಷದ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ.
ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಮಾರ್ಗದರ್ಶನ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರಾದ ಸುಧಾಕರ್ ಬಿ ಗುನಗಿ, ಕ್ರಿಕೆಟ್ ತರಬೇತುದಾರ ಕುಮಾರ ಧೀರಜ್ ಸಾಗೇಕರ್ ಮತ್ತು ಉಪಯುಕ್ತ ಟಿಪ್ಸ್ ನೀಡಿದ ಉತ್ತಮ ವೀಕ್ಷಣೆ ವಿವರಣೆ ನೀಡುತ್ತಿರುವ ಸಂತೋಷ ರಾಯ್ಕರ್, ಉತ್ತಮ ತರಬೇತಿ ಶಿಕ್ಷಕ ವಿಮಲಕುಮಾರ ವಿ ನಾಯಕ ಮಾರ್ಗದರ್ಶನ ನೀಡಿದ್ದಕ್ಕೆ ನ್ಯೂ ಹೈ ಸ್ಕೂಲ್ ತಂಡ ಚಾಂಪಿಯನ್ ಆಗಲು ಸಹಾಯವಾಗಿದೆ.
ನ್ಯೂ ಹೈ ಸ್ಕೂಲ್ ಬಾಡ ಕಾರವಾರ ತಂಡ ಕಡಿಮೆ ಸಮಯದಲ್ಲಿ ಅಲ್ಪಸೌಕರ್ಯದಲ್ಲಿಯೂ ಉತ್ತಮ ಪ್ರದರ್ಶನ ನೀಡಿದೆ. ಕುಮಾರ್ ಗಜಾನನ ಲೋಣೇಕರ್ ಫೈನಲ್ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ, ಪವರ್ ಹಿಟರ್ ಆಫ್ ದಿ ಟೂರ್ನಮೆಂಟ್, ಮೋಸ್ಟ್ ವಾಲ್ಯುಏಬಲ್ ಪ್ಲೇಯರ್ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ, ಅನಿಲ್ ಕುಮಾರ್ ವಡ್ಡರ್ ಬೆಸ್ಟ್ ಫೀಲ್ಡರ್ ಪ್ರಶಸ್ತಿ, ನಾಯಕ ಕುಮಾರ್ ಸಂಸ್ಕಾರ ಡಿ ಪೆಡ್ನೆಕರ್ ಆಕರ್ಷಕ ಟ್ರೋಪಿ 15000 ನಗದು ತಂಡದ ಪರವಾಗಿ ಪಡೆದುಕೊಂಡರು. ವಿಜೇತ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಜನರಿಗೆ ಸಹಕರಿಸಿದ ಹಳೆಯ ವಿದ್ಯಾರ್ಥಿ ಕ್ರೀಡಾಪಟುಗಳಿಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು ಶಿವಾನಂದ್ ಕಾಮತ್ ಕಾರ್ಯದರ್ಶಿ ನಾಗರಾಜ್ ಜೋಶಿ, ಮುಖ್ಯೋಪಾಧ್ಯಾಯರಾದ ರಾಜೇಶ್ ಶೇಣವಿ, ಪ್ರೀಮಿಯರ್ ಕಾಲೇಜಿನ ಪ್ರಾಂಶುಪಾಲರಾದ ಗೋವಿಂದಪ್ಪ ಹಾಗೂ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗ ಪಾಲಕರು ಊರ ನಾಗರಿಕರು ವಿಜೇತ ತಂಡಕ್ಕೆ ಶುಭ ಕೋರಿದ್ದಾರೆ.
ಇದನ್ನು ಓದಿ : ಮೂರನೇಯದ್ದು ಹೆಣ್ಣು ಮಗುವೆಂದು ಪತಿ ಮಹಾಶಯ ಮಾಡಿದ್ದು ಅಪರಾಧಿ ಕೃತ್ಯ.
ಬಿಸಿ ಗಂಜಿಯಲ್ಲಿ ಬಿದ್ದು ಮಗು ಸಾವು.
ಮುರ್ಡೇಶ್ವರದಲ್ಲಿ ಗೂಡಂಗಡಿ ಕಿರಿಕಿರಿ. ಅಧಿಕಾರಿಗಳು, ಪೊಲೀಸರಿಂದ ತೆರವು ಕಾರ್ಯಾಚರಣೆ.