ಭಟ್ಕಳ (Bhatkal): ಮಾತೋಭಾರ ಮುರ್ಡೇಶ್ವರ  ಜಾತ್ರೆ ಸಂದರ್ಭದಲ್ಲಿ  ಆಟೋ ಯೂನಿಯನ್ ಹಾಗೂ ಪೊಲೀಸರ ನಡುವೆ  ಗೊಂದಲದ ಉಂಟಾಗಿ ಚಾಲಕರು ಧೀಡಿರ್ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿ ವರ್ಷವೂ ಬಸ್ ಸ್ಟಾಂಡ್ ಬಳಿ ಆಟೋ ನಿಲ್ಲಿಸಿ ಚಾಲಕರು ಬಾಡಿಗೆ ಮಾಡುತ್ತಿದ್ದರು. ಈ ವರ್ಷ  ಎಲ್ಲಾ ಆಟೋಗಳನ್ನು ಉದ್ದೇಶಪೂರ್ವಕವಾಗಿ ಕೆನರಾ ಬ್ಯಾಂಕ್ ಬಳಿ ಬ್ಯಾರಿಕೇಡ್ ಹಾಕಿ ನಿಲ್ಲಿಸಲಾಗಿದೆ. ಅದನ್ನ ಪ್ರಶ್ನಿಸಿ ಚಾಲಕರು ಪ್ರತಿಭಟಿಸಿದ್ದಾರೆ. ಪ್ರತಿಭಟನಾ ವೇಳೆ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆದಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಮುರ್ಡೇಶ್ವರ  ಆಟೋ ಯೂನಿಯನ್‌ ಅಧ್ಯಕ್ಷ ಶ್ರೀಧರ ನಾಯ್ಕ, ನಮ್ಮಿಂದ ಜಾತ್ರೆಯಲ್ಲಿ ಯಾವುದೇ ರೀತಿಯಲ್ಲಿ ಕಾನೂನಿನ ಉಲ್ಲಂಘನೆ ಆಗಿಲ್ಲ. ಪೊಲೀಸರು ನಮ್ಮನ್ನು ಕರೆದು ಮಾತಾಡಬೇಕಿತ್ತು. ರಾತ್ರಿ ಬಾಡಿಗೆ ಹೊಡೆದು ನಮ್ಮ ಹೊಟ್ಟೆಪಾಡು ನೋಡಿಕೊಳ್ಳಬೇಕು. ನಾವು ನಾಳೆ ತನಕ ಯಾವುದೇ ಬಾಡಿಗೆ ಹೊಡೆಯೋದಿಲ್ಲ ಅಂತಾ ಎಲ್ಲಾ ಆಟೋಗಳನ್ನು ಬಂದ್ ಮಾಡಿದ್ದೇವೆ. ನಾಳೆ ಪೊಲೀಸರ ಬಳಿ ಮಾತುಕತೆ ನಡೆದ ನಂತರ ತೀರ್ಮಾನಿಸಲಾಗುವುದು ಎಂದರು.

ಇದನ್ನು ಓದಿ : ಹೊನ್ನಾವರ ಸೇತುವೆ ಮೇಲೆ ಭೀಕರ ಅಪಘಾತ. ಯುವತಿ ದುರ್ಮರಣ

ಮುರ್ಡೇಶ್ವರ ಮಹಾ ರಥೋತ್ಸವ ಸಂಪನ್ನ. ಭಕ್ತಿ-ಭಾವದಿಂದ ತೇರು ಎಳೆದ ಭಕ್ತರು