ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ನವರಾತ್ರಿಯ ಶುಭ ವೇಳೆ ಮಹಾನವಮಿ ದಿನವಾದ ಇಂದು ಕಾರವಾರದ ಜಿಲ್ಲಾ ಸಶಸ್ತ್ರ ಮೀಸಲು(DAR) ಪಡೆಯ ಆಯುಧಗಳು ಮತ್ತು ಸಶಸ್ತ್ರಗಳಿಗೆ ಪೂಜೆ ಸಲ್ಲಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ (SP Deepan) ಅವರು ದುರ್ಗಾ ಪೂಜೆ ನೆರವೇರಿಸಿ ಆಯುಧಗಳಿಗೆ ಗೌರವ ಸಲ್ಲಿಸಿದರು. ಹಾಗೆಯೆ ಪೊಲೀಸ್ ಇಲಾಖೆಯಿಂದ ಕರ್ತವ್ಯಕ್ಕೆ ಉಪಯೋಗಿಸುವ ಪೊಲೀಸ್ ಇಲಾಖೆಯ ವಾಹನಗಳಿಗೂ ಸಾಮೂಹಿಕವಾಗಿ ಪೂಜೆ ಸಲ್ಲಿಸಲಾಯಿತು.

ಆಯುಧಪೂಜೆಯನ್ನು(Ayudha Pooja) ಆಶ್ವಯುಜ ಶುದ್ಧ ನವಮಿ ತಿಥಿಯಂದು ಆಚರಿಸಲಾಗುತ್ತದೆ.  ಈ ದಿನವನ್ನು “ಮಹಾನವಮಿ” ಎನ್ನುತ್ತಾರೆ. ಆಯುಧಪೂಜೆ ಅಥವಾ ಅಸ್ತ್ರಪೂಜೆ ದಸರಾ ಉತ್ಸವದ ಒಂದು ಭಾಗ.  ಈ ದಿನ  ಉಪಯೋಗಿಸುವ ಎಲ್ಲಾ ರೀತಿಯ ಉಪಕರಣಗಳು, ಆಯುಧಗಳು,  ಯಂತ್ರಗಳು ಎಲ್ಲವನ್ನೂ ಪೂಜಿಸುವುದು ವಾಡಿಕೆ. ಹೀಗಾಗಿ ಎಲ್ಲಡೆ ಈದಿನ ಪೂಜೆ ಸಲ್ಲಿಸಲಾಗುತ್ತದೆ.

ಪೂಜಾ ಕಾರ್ಯಕ್ರಮದಲ್ಲಿ ಅಡಿಷನಲ್ ಎಸ್ಪಿ ಕೃಷ್ಣಮೂರ್ತಿ, ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಇದನ್ನು ಓದಿ : ಕಾರವಾರದಿಂದ ಅಂಕೋಲಾಕ್ಕೆ ಸಾಗುವ ಸುರಂಗ ಮಾರ್ಗದಲ್ಲಿ ಸಂಚಾರಕ್ಕೆ ಅಸ್ತು

ವಿಮಾನ ನಿಲ್ದಾಣದಲ್ಲಿ ದಾಂಡಿಯಾ, ಗಾರ್ಭ ನೃತ್ಯ ಮಾಡಿದ ಪ್ರಯಾಣಿಕರು, ಗಗನಸಖಿಯರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ಬೆಂಕಿ. ಇಬ್ಬರು ಪಾರು.