ಕುಮಟಾ (Kumta): ಅದೇಕೋ ಏನೋ ನಿಂತ ಬಸ್ ಗಳಿಗೆ ಬೆಂಕಿ ಬೀಳುತ್ತಿವೆ. ನಿಂತಿದ್ದ ಸರ್ಕಾರಿ ಬಸ್(Government Bus) ಗೆ ಆಕಸ್ಮಿಕ ಬೆಂಕಿ (Fire) ತಗುಲಿದ ಘಟನೆ ಕುಮಟಾದ ಬಸ್ ಡಿಪೋದಲ್ಲಿಯೇ(Kumta Bus Depot) ಸಂಭವಿಸಿದೆ.

ಹೆರವಟ್ಟಾದಲ್ಲಿರುವ(Heravatta) ಬಸ್ ಡಿಪೋದಲ್ಲಿ ನಿಂತುಕೊಂಡಿದ್ದ ಬಸ್‌ಗೆ ಹೊತ್ತಿಕೊಂಡಿದೆ. ತಡರಾತ್ರಿ 2-05ಗಂಟೆಗೆ ‌ಈ ಅವಘಡ(Incident) ಸಂಭವಿಸಿದೆ. ಘಟನೆಯಿಂದ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಪಕ್ಕದಲ್ಲಿದ್ದ ಇನ್ನೊಂದು ಬಸ್ ಗೆ ಸ್ವಲ್ಪ ಬೆಂಕಿ ತಾಗಿದೆ.

ಸುದ್ದಿ ತಿಳಿದ ತಕ್ಷಣ ಕುಮಟಾ  ಅಗ್ನಿಶಾಮಕ ದಳ‌(Kumta Fire Brigade) ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿರಬಹುದೆಂದು ಶಂಕಿಸಲಾಗಿದೆ.

ಇದನ್ನು ಓದಿ : ಹೊನ್ನಾವರದಲ್ಲಿ ಯುವತಿಯರ ರಕ್ಷಣೆ

ನೇತ್ರಾಣಿಯಲ್ಲಿ ನಟ ಡಾಲಿ ಧನಂಜಯ

ಕಾರವಾರ ಮಾರ್ಕೆಟ್ ಮೇಲೆ ದಾಳಿ

ಅಂಕೋಲದಲ್ಲಿ ಕಾರು ಪಲ್ಟಿ