ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಧಾರವಾಡ(Dharwad) : ಉತ್ತರಕರ್ನಾಟಕ(Uttar karnataka) ಭಾಷಾ ಶೈಲಿಯ ಹಾಸ್ಯಗಳನ್ನ ಸಾಮಾಜಿಕ ಜಾಲ ತಾಣಗಳಲ್ಲಿ(Social Media) ಪ್ರಚುರಗೊಳಿಸುತ್ತಿದ್ದ ಯೂಟ್ಯೂಬರ್ ಕ್ವಾಜಾ ಬಂದೇನ್ವಾಜಾ ಮಹಮದ್ ಹನೀಫ್ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ (Youtuber Mukaleppa) ವಿರುದ್ಧ ಬಜರಂಗದಳ ಕಾರ್ಯಕರ್ತರು ದೂರು ನೀಡಿದ್ದಾರೆ.
ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಕಾರ್ಯಕರ್ತರು ಲವ್ ಜಿಹಾದ್ (Love Jeehad) ಆರೋಪ ಮಾಡಿದ್ದಾರೆ. ಮುಕಳೆಪ್ಪ(Mukaleppa) ಸುಳ್ಳು ದಾಖಲೆ ನೀಡಿ ಹಿಂದೂ ಯುವತಿಯನ್ನ ಮದುವೆಯಾಗಿದ್ದಾನೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಮೂಲತಃ ಇಸ್ಲಾಂ ಧರ್ಮಕ್ಕೆ(Islam Religion) ಸೇರಿದ ಮುಕಳೆಪ್ಪ, ನಕಲಿ ದಾಖಲೆ ಕೊಟ್ಟು ಹಿಂದೂ ಯುವತಿಯನ್ನ ವಿವಾಹವಾಗಿದ್ದಾನೆ. ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ಸಬ್ ರಿಜಿಸ್ಟ್ರಾರ್(Mundgod Subregister) ಕಚೇರಿಯಲ್ಲಿ ರಿಜಿಸ್ಟರ್ ಮಾಡಿಕೊಳ್ಳುವ ಮೂಲಕ ಮುಕಳೆಪ್ಪ ವಿವಾಹವಾಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಯುಟ್ಯೂಬರ್ ಮುಕಳೆಪ್ಪ(Youtuber Mukaleppa) ಹಿಂದೂ ಯುವತಿಯರನ್ನೇ ಟಾರ್ಗೆಟ್ ಮಾಡಿ ಅವರ ಜೊತೆ ವೀಡಿಯೋ ಮಾಡುತ್ತಾನೆ. ಶಾರ್ಟ್ ವೀಡಿಯೋದಲ್ಲಿ ಹಿಂದೂ ಯುವತಿಯರು ಹಾಗೂ ಧರ್ಮಕ್ಕೆ ಅವಮಾನ ಮಾಡುವ ರೀತಿಯಲ್ಲಿ ವೀಡಿಯೋ ಮಾಡುತ್ತಾನೆಂದು ದೂರಿನಲ್ಲಿ ತಿಳಿಸಿದ್ದಾರೆ. ಕಳೆದ ಜೂನ್ ಐದರಂದು ನಕಲಿ ದಾಖಲೆ ನೀಡಿ ಹಿಂದೂ ಯುವತಿಯನ್ನ ವಿವಾಹವಾಗಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಧಾರವಾಡ ಗ್ರಾಮೀಣ ಠಾಣೆಯಲ್ಲಿ (Dharwad Rural Police Station) ಭಜರಂಗದಳ ಕಾರ್ಯಕರ್ತರು(Bharangadal Worker) ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ(Dharwad Rural Police Station) ಬಜರಂಗದಳ ಕಾರ್ಯಕರ್ತರು ದೂರು ಕೊಟ್ಟಿದ್ದು, ಎಫ್ಐಆರ್ ದಾಖಲಾಗಿಲ್ಲ. ಗಾಂಧಿನಗರ ಅಂತ ಖೊಟ್ಟಿ ದಾಖಲೆ ನೀಡಿ ಮದುವೆಯಾಗಿರುವ ಕ್ವಾಜಾ ಜಾತಿಯಲ್ಲಿ ಮುಸ್ಲಿಂ ಆದ್ರೂ ಹಿಂದೂ ಯುವತಿಯರ ಜೊತೆ ವಿಡಿಯೋ ಮಾಡಿ ಧರ್ಮಕ್ಕೆ ಅವಮಾನ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಹಿಂದೂ ಹೆಣ್ಣು ಮಕ್ಕಳು ಇಂಥ ಮತಾಂಧರಿಂದ ದೂರ ಇರಬೇಕು ಎಂದು ಬಜರಂಗದಳ ಕಾರ್ಯಕರ್ತರು ಮನವಿ ಮಾಡಿಕೊಂಡಿದ್ದಾರೆ. ದೂರಿಗೆ ಸಂಬಂಧಿಸಿ ಧಾರವಾಡ ಗ್ರಾಮೀಣ ಪೊಲೀಸರು ಈ ಬಗ್ಗೆ ಮುಕಳೆಪ್ಪ ಪತ್ನಿಯನ್ನ ವಿಚಾರಣೆ ನಡೆಸಿದ್ದಾರೆ.
ಇದನ್ನು ಓದಿ : ಶೀಲ ಶಂಕಿಸಿ ಪತ್ನಿ ಕೊಲೆ ಮಾಡಿದ ಪತಿ. ನಾಪತ್ತೆ ನಾಟಕವಾಡಿ ಚಿತ್ತಾಕುಲ ಪೊಲೀಸರ ಬಲೆಗೆ ಬಿದ್ದ ಆಸಾಮಿ.
ಹೊನ್ನಾವರದಲ್ಲಿ ಯುವಕರಿಬ್ಬರ ನಡುವೆ ಜಗಳ. ಚಾಕು ಇರಿದ ಅನ್ಯಕೋಮಿನ ವ್ಯಕ್ತಿಯ ಬಂಧನ.