ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕೋಲ್ಕತ್ತಾ(Kolkatta) :  ಅರಣ್ಯ ಸಿಬ್ಬಂದಿ ಮೇಲೆ ಹುಲಿ ದಾಳಿ (Tiger Attack) ನಡೆಸಿದ ಘಟನೆ ಕೋಲ್ಕತ್ತಾದ ಸುಂದರಬನ್ಸ್‌ನಲ್ಲಿ(Kolkatta sunderbans)  ಸಂಭವಿಸಿದೆ.

ಅರಣ್ಯ ಇಲಾಖೆಯ(Forest Department) ಇತರ ಸಿಬ್ಬಂದಿಗಳ ಸಹಾಯದಿಂದ ಪ್ರಾಣಪಾಯದಿಂದ ಪಾರಾಗಿದ್ದಾನೆ. ನೌಕರನನ್ನು ರಕ್ಷಿಸುತ್ತಿರುವ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಸೋಮವಾರ ಸುಂದರಬನ್ಸ್‌ ಅಭಯಾರಣ್ಯದಲ್ಲಿದ್ದ ಸಿಬ್ಬಂದಿಗಳು ಹುಲಿಯನ್ನು ಅಜ್ಮಲ್ಮರಿ ಅರಣ್ಯಕ್ಕೆ ಓಡಿಸಲು  ಯತ್ನಿಸುತ್ತಿದ್ದರು. ಈ ವೇಳೆ ನೌಕರನ ಮೇಲೆ ಹುಲಿ ದಾಳಿ(Tiger Attack) ಮಾಡಿದೆ. ಎಂಟರಿಂದ ಹತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಹುಲಿಯನ್ನು ಮತ್ತೆ ಕಾಡಿಗೆ ಓಡಿಸಲು ಪ್ರಯತ್ನಿಸುತ್ತಿದ್ದರು. ಇದ್ದಕ್ಕಿದ್ದಂತೆ ಹುಲಿ ಸಿಬ್ಬಂದಿ ಕಡೆಗೆ ಬಂದು ಒಬ್ಬರ ಮೇಲೆ ಅಟ್ಯಾಕ್ ಮಾಡಿದೆ. ಪರಿಣಾಮ ತೀವ್ರ ಗಾಯವಾಗಿದೆ. ಅಷ್ಟರಲ್ಲೇ ಅಲ್ಲೇ ಇದ್ದ ಸಹೋದ್ಯೋಗಿಗಳು ಬಡಿಗೆಗಳಿಂದ ಹುಲಿಗೆ ಬಡಿದಿದ್ದಾರೆ. ಈ ವೇಳೆ ಹುಲಿ ಆ ವ್ಯಕ್ತಿಯನ್ನು ಬಿಟ್ಟು ಕಾಡಿನತ್ತ ಓಡಿಹೋಗಿದೆ ಎಂದು ತಿಳಿದುಬಂದಿದೆ.

ಗಾಯಗೊಂಡ ಸಿಬ್ಬಂದಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಕೋಲ್ಕತ್ತಾದ ಆಸ್ಪತ್ರೆಗೆ(Kolkatta Hospital) ಸ್ಥಳಾಂತರಿಸಿದ್ದಾರೆ. ಘಟನೆಯಲ್ಲಿ ಓರ್ವ ಸಿಬ್ಬಂದಿ ಹೊರತುಪಡಿಸಿ ಮತ್ಯಾರಿಗೂ ಗಾಯಗಳಾಗಿಲ್ಲ ಎಂದು ವಿಭಾಗೀಯ ಅರಣ್ಯ ಅಧಿಕಾರಿ(DFO) ನಿಶಾ ಗೋಸ್ವಾಮಿ ತಿಳಿಸಿದ್ದಾರೆ.

ಇದನ್ನು ಓದಿ : ಹೊಸ ಅವತಾರದಲ್ಲಿ ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಯತ್ನ.

ಒಂದೇ ದಿನ ಮೂರು ಬಾರೀ ಗುಡ್ಡ ಏರಿ ಇಳಿದ ಪರ್ವತಾರೋಹಿ.

ಮೀಟರ್ ಬಡ್ಡಿ, ಮೈಕ್ರೋಫೈನಾನ್ಸ್ ಅಬ್ಬರ ತಡೆಯಲು  ಧೈರ್ಯದಿಂದ ಮುಂದೆ ಬನ್ನಿ. ಪೊಲೀಸ್ ಇಲಾಖೆ ಪ್ರಕಟಣೆ.

ಪ್ರಯಾಗರಾಜ್ ನಲ್ಲಿ ಪವಿತ್ರ ಸ್ನಾನ ಮಾಡಿದ ಡಿ ಕೆ ಶಿವಕುಮಾರ. ವ್ಯವಸ್ಥೆ ಬಗ್ಗೆ ಮೆಚ್ಚುಗೆ.