ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಉಡುಪಿ(Udupi) : ಮೀನುಗಾರಿಕಾ ಕಾರ್ಮಿಕರಾಗಿ(Fishing Labour) ಮಲ್ಪೆಗೆ ಬಂದು ಬಂಧಿತರಾಗಿದ್ದ 10 ಜನ ಅಕ್ರಮ ಬಾಂಗ್ಲಾ ವಲಸಿಗರಿಗೆ (Illegal Bangla citizens)  ಉಡುಪಿ ಜಿಲ್ಲಾ ನ್ಯಾಯಾಲಯ (Udupi District Court) ಎರಡು  ವರ್ಷ ಜೈಲು ಶಿಕ್ಷೆ ಮತ್ತು ತಲಾ 10 ಸಾವಿರ ರೂ. ದಂಡ ವಿಧಿಸಿದೆ.

ಕಾರವಾರ ಜೈಲಿನಲ್ಲಿ ಮತ್ತೆ ಖೈದಿಗಳ ದಾಂಧಲೆ. ಟಿವಿ ಪುಡಿಗೈದು ಅಟ್ಟಹಾಸ.

ಬಾಂಗ್ಲಾ ದೇಶದ ಇಸ್ಮಾಯಿಲ್ ಎಸ್ ಕೆ,  ಹಕೀಮ್​ ಆಲಿ, ಸುಜೋನ್​ ಎಸ್​.ಕೆ.,  ಕರೀಮ್​ ಎಸ್​.ಕೆ., ಸಲಾಂ ಎಸ್​.ಕೆ., ರಾಜಿಕುಲ್​ ಎಸ್​.ಕೆ., ಮೊಹಮ್ಮದ್​ ಸೋಜಿಬ್​ , ರಿಮೂಲ್​ , ಮೊಹಮ್ಮದ್​ ಜಹಾಂಗಿರ್​ ಆಲಂ ಮತ್ತು ಮೊಹಮ್ಮದ್​ ಇಮಾಮ್​ ಶೇಖ್​ ಶಿಕ್ಷೆಗೊಳಗಾದವರು.

ಉಡುಪಿ(Udupi) ಜಿಲ್ಲೆಯ ಮಲ್ಪೆ ಠಾಣಾ ಪೊಲೀಸರು(Malpe Station Police) ಗಸ್ತಿನಲ್ಲಿದ್ದಾಗ 2024ರ ಅ.11ರಂದು ಸಾಯಂಕಾಲ ಸುಮಾರಿಗೆ  ಮಲ್ಪೆ ವಡಭಾಂಡೇಶ್ವರ ಬಸ್​ ನಿಲ್ದಾಣದ ಬಳಿ ಏಳು ಜನರು ಅನುಮಾನಸ್ಪದವಾಗಿ ಲಗೇಜ್​ ಸಮೇತ ಓಡಾಡುತ್ತಿದ್ದರು. ಇದನ್ನು ಕಂಡು ವಿಚಾರಿಸಿದಾಗ ಆರೋಪಿತರು ಯಾವುದೇ ಅನುಮತಿ ದಾಖಲೆಗಳನ್ನು ಪಡೆಯದೇ ಅಕ್ರಮವಾಗಿ ನಕಲಿ ಆಧಾರ್​ ಕಾರ್ಡ್​(Fake Adhar Card) ದಾಖಲೆಗಳನ್ನು ಸೃಷ್ಟಿಸಿರುವುದು ಕಂಡುಬಂದಿತ್ತು. ಹೀಗಾಗಿ ಏಳು ಜನರನ್ನು ಬಂಧಿಸಲಾಗಿತ್ತು.

ಬಳಿಕ  ಬಂಧಿತರ ತನಿಖೆ ನಡೆಸಿದಾಗ  ಬಾಂಗ್ಲಾದೇಶದಿಂದ ಉಡುಪಿ(Bangla To Udupi) ತಾಲೂಕು ಪಡುತೋನ್ಸೆ ಗ್ರಾಮದ ಹೂಡೆಗೆ ಬಂದಿರುವುದಾಗಿ ಬಾಯ್ಬಿಟ್ಟಿದ್ದರು. ಅಲ್ಲದೇ ಇವರು ನೀಡಿದ ಮಾಹಿತಿಯಂತೆ ಉಳಿದ 3 ಮಂದಿ ಅಕ್ರಮ ವಲಸಿಗರನ್ನು ವಶಕ್ಕೆ  ಪಡೆಯಲಾಗಿತ್ತು.

ಆರೋಪಿಗಳು ನಕಲಿ ಭಾರತೀಯ ದಾಖಲಾತಿ ಸೃಷ್ಟಿಸಿ ಉಡುಪಿಗೆಎಂಟ್ರಿ ಕೊಟ್ಟಿದ್ದರು.  ಸಿಕ್ಕಿಂ ಅಗರ್ತಲಾದ ಕಾಜೋಲ್ ಎಂಬಾತ ನಕಲಿ ಆಧಾರ್ ಕಾರ್ಡ್(Duplicate Adhar Card) ಸೃಷ್ಟಿಸಿದ್ದಾನೆಂದು ತಿಳಿದುಬಂದಿತ್ತು. ಹಾಗೇ ಮತ್ತೋರ್ವ ಆರೋಪಿ ಉಸ್ಮಾನ್ ಎಂಬಾತ ಅಕ್ರಮವಾಗಿ ಕರೆತಂದು ಕೆಲಸದ  ವ್ಯವಸ್ಥೆ ಮಾಡಿದ್ದ.ಹೀಗಾಗಿ ಅಕ್ರಮ ಬಾಂಗ್ಲಾ ವಲಸಿಗರನ್ನು ಬಂಧಿಸಿದ್ದ ಮಲ್ಪೆ ಪೊಲೀಸರು(Malpe Pokice), ಅವರಿಗೆ  ಶಿಕ್ಷೆಯಾಗುವಂತೆ ಮಾಡಿದ್ದಾರೆ. ಇನ್ನೂ ರಾಜ್ಯದ ಯಾವ್ಯಾವ ಕಡೆ ಇಂಥ ವಲಸಿಗರು‌ ಆಶ್ರಯ ಪಡೆದರೂ ಅಚ್ಚರಿಯಿಲ್ಲ.

ಇದನ್ನು ಓದಿ : ಗೋವಾದ ನೈಟ್ ಕ್ಲಬ್ ಮಾಲೀಕರು ವಿದೇಶಕ್ಕೆ ಎಸ್ಕೇಪ್. ಮತ್ತೊಂದು ಕ್ಲಬ್ ಉಡೀಸ್ದ ಮಾಡಿದ ಸರ್ಕಾರ.

ಮದ್ಯ ಸಾಗಿಸುತ್ತಿದ್ದ ಆಸಾಮಿ ಬೈಕ್ ಬಿಟ್ಟು ಪರಾರಿ. ಅಬಕಾರಿ ಕಾರ್ಯಾಚರಣೆ.