ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಭಟ್ಕಳದ ಮುಗ್ದುಮ್ ಕಾಲೋನಿ ಗುಡ್ಡದ ಅರಣ್ಯ ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿ ಜಾನುವಾರುಗಳ ತ್ಯಾಜ್ಯ ಬಿಸಾಡಿದ ಇಬ್ಬರು ಆರೋಪಿಗಳನ್ನ ಭಟ್ಕಳ ಶಹರ ಠಾಣೆ ಪೊಲೀಸರು(Bhatkal Town Station Police) ಬಂಧಿಸಿದ್ದಾರೆ.
ಭಟ್ಕಳದ ಸಫಾಸ್ಟ್ರೀಟ್ ಮುಗ್ದುಮ್ ಕಾಲೊನಿ ನಿವಾಸಿ
ಮೊಹ್ಮದ ಸಮಾನ್ (19), ಚೌಥನಿ ನಿವಾಸಿ ಮೊಹಮ್ಮದ ರಾಹೀನ್ (20) ಬಂಧಿತರಾಗಿದ್ದಾರೆ. ಬಂಧಿತರಿಂದ ಕೆಲವೊಂದು ವಸ್ತುಗಳು ಮತ್ತು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿತರು ಜಾನುವಾರುಗಳನ್ನ ಕಟಾವು ಮಾಡಿ ತ್ಯಾಜ್ಯಗಳನ್ನು ಭಟ್ಕಳದ ಮುಗ್ದಮ್ ಕಾಲೋನಿ ಗುಡ್ಡದ ಅರಣ್ಯ ಜಾಗದಲ್ಲಿ ಬಿಸಾಡಿದಲ್ಲದೇ, ಅರಣ್ಯೆತರ ಅಪರಾಧಗಳು ಮಾಡಿದ್ದರು. ಇದಕ್ಕೆ ಸಂಬಂಧಿಸಿ ಭಟ್ಕಳ ಉಪವಲಯ ಅರಣ್ಯಾಧಿಕಾರಿ ಮಾರುತಿ ಗಣಪತಿ ಸೋರಂಗಾವಿ ಅವರು ಸಪ್ಟೆಂಬರ್ 11ರಂದು ಭಟ್ಕಳ ಶಹರ ಠಾಣೆಯಲ್ಲಿ(Bhatkal Town Station) ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ ವಾಹನವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಭಟ್ಕಳ ಡಿವೈಎಸ್ಪಿ ಮಹೇಶ ಎಂ.ಕೆ ರವರ ಮಾರ್ಗದರ್ಶನದಲ್ಲಿ ಭಟ್ಕಳ ಶಹರ ಪೋಲಿಸ್ ಠಾಣೆಯ ಪೋಲಿಸ್ ಇನ್ಸಪೆಕ್ಟರ್ ದಿವಾಕರ ಪಿ ಎಮ್ ರವರ ನೇತ್ರತ್ವದಲ್ಲಿ ಮತ್ತು ಪಿಎಸ್ಐ ನವೀನ ನಾಯ್ಕ ಮತ್ತು ತಿಮ್ಮಪ್ಪ ಎಸ್ ಹಾಗೂ ಸಿಬ್ಬಂದಿಗಳಾದ ದಿನೇಶ ನಾಯಕ, ದೇವು ನಾಯ್ಕ, ದೀಪಕ ನಾಯ್ಕ, ವಿನಾಯಕ ಪಾಟೀಲ್, ಕಾಶಿನಾಥ ಕೊಟಗೊಣಸಿ, ಸುರೇಶ ಮರಾಠಿ, ಕಿರಣ ಪಾಟೀಲ್ ಮತ್ತು ರೇವಣಸಿದ್ದಪ್ಪ ಮಾಗಿ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ಉದಯ ಗುನಗಾ ಮತ್ತು ಬಬನ ಕದಂ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಇದನ್ನು ಓದಿ : ಕಡಲತೀರದಲ್ಲಿ ತಟರಕ್ಷಕ ಪಡೆಗೆ ಜಾಗ ನೀಡಬೇಡಿ. ಮೀನುಗಾರರಿಂದ ಜಿಲ್ಲಾಧಿಕಾರಿಗೆ ಮನವಿ.
ಜಾತಿಗಣತಿಯಲ್ಲಿ ಗೊಂದಲ. ಬಾಂದಿ ಎಂದು ನಮೂದಿಸಲು ಕೃಷ್ಣಾನಂದ ಬಾಂದೇಕರ ಮನವಿ.
ಭಟ್ಕಳದ ದೇವಸ್ಥಾನ ಕಳ್ಳರ ಪತ್ತೆ ಹಚ್ಚಿದ ಗ್ರಾಮೀಣ ಠಾಣೆ ಪೊಲೀಸರು.
ಬನವಾಸಿಯನ್ನ ಶಿರಸಿ-ಸಿದ್ದಾಪುರ ಕ್ಷೇತ್ರಕ್ಕೆ ಸೇರಿಸಿ. ಈ ಹಿಂದಿನಂತೆ ಮೀಸಲು ಕ್ಷೇತ್ರ ಮಾಡಲು ಆಗ್ರಹ.