ಕಾರವಾರ(KARWAR) :  ಎಷ್ಯಾದ(ASHIA) ಅತಿ ದೊಡ್ಡ  ರಕ್ಷಣಾ ಯೋಜನೆಯ ಸಮೀಪ ರಾತ್ರಿ ದ್ರೋಣ್(DRONE) ಹಾರಾಟ ನಡೆಸಿರುವುದು ಗುಪ್ತಚರ ಸಂಸ್ಥೆಯ ತಲೆನೋವಿಗೆ ಕಾರಣವಾಗಿದೆ.

ಕೆಲ ದಿನಗಳ ಹಿಂದೆ ಹನಿಟ್ರ್ಯಾಪ್ ಗೆ(HONEYTRAP) ಒಳಗಾಗಿ ಮಾಹಿತಿ ಶೇರ್ ಮಾಡುತ್ತಿದ್ದವರನ್ನ ರಾಷ್ಟ್ರೀಯ ತನಿಖಾ ದಳ  ವಿಚಾರಣೆ ನಡೆಸಿದ ಬೆನ್ನಲ್ಲೇ  ನೌಕಾ ಪ್ರದೇಶದಲ್ಲಿ(NAVAL AREA) ದ್ರೋಣ್ ಹಾರಾಟ ಟೆಂಕ್ಷನ್ ಕ್ರಿಯೇಟ್ ಮಾಡಿದೆ.

ಕಾರವಾರದಲ್ಲಿ  ಐಎನ್ಎಸ್ ಕದಂಬ(INS KADAMBA) ನೌಕಾನೆಲೆ ಭಾರತೀಯ ರಕ್ಷಣಾ(DEFENCE) ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಮುದ್ರ ಮಾರ್ಗದಲ್ಲಿ ನುಸುಳುವ ಶತ್ರುಗಳಿಗೆ ಈ ನೌಕಾನೆಲೆ ನುಂಗಲಾರದ ತುತ್ತಾಗಿದೆ.  ನೌಕಾನೆಲೆ ಸುತ್ತಮುತ್ತಲಿನ ಹಲವು ವ್ಯಾಪ್ತಿಯ ಪ್ರದೇಶದಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. 24 ಗಂಟೆಯೂ ಬಿಗಿ ಹದ್ದಿನ ಕಣ್ಣಿಡಲಾಗುತ್ತದೆ. ಆದರೆ ರಾತ್ರಿ ಹೊತ್ತು ರಕ್ಷಣಾ ಯೋಜನೆಯ ಪ್ರದೇಶದ ಸರಹದ್ದಿನಲ್ಲಿ  ಡ್ರೋನ್ ಹಾರಿದ್ದರಿಂದ ಭಾರಿ ಆತಂಕ ಸೃಷ್ಟಿಯಾಗಿದೆ.

ಕಾರವಾರ ತಾಲೂಕಿನ ಅರಗಾದ ವಕ್ಕನಳ್ಳಿ ಭಾಗದಿಂದ ಐಎನ್ಎಸ್ ಪತಂಜಲಿ(INS PATANJALI) ಆಸ್ಪತ್ರೆ ಹಿಂಬದಿಯಿಂದ ಬಿಣಗಾ(BINAGA) ಚತುಷ್ಪಥ  ಹೆದ್ದಾರಿಯ ಸುರಂಗ ಮಾರ್ಗದವರೆಗೂ ಡ್ರೋನ್ ಹಾರಿರುವ ಮಾಹಿತಿ ಲಭ್ಯವಾಗಿದೆ. ಸ್ಥಳೀಯರೊಬ್ಬರ ಮೊಬೈಲ್ ನಲ್ಲಿ  ಡ್ರೋಣ್ ಹಾರಾಟದ ದೃಶ್ಯ ಸೆರೆಯಾಗಿದ್ದು  ಸೆರೆ ಸಿಕ್ಕ ವಿಡಿಯೋ ಮೂಲಕ ನೌಕಾನೆಲೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.

ಬೈಕ್ ಅಥವಾ ಸನ್ ರೂಫ್ ಕಾರ್ ಮೂಲಕ ತೆರಳುತ್ತಾ ಈ ಡ್ರೋನ್ ಆಪರೇಟ್ ಮಾಡಿರುವ ಸಂಶಯ ವ್ಯಕ್ತವಾಗಿದೆ. ನೌಕಾನೆಲೆ ಆರಂಭವಾದಾಗಿನಿಂದ ಸುರಕ್ಷತೆಯ ದೃಷ್ಟಿಯಿಂದ ನೌಕಾ ನೆಲೆ ಪ್ರದೇಶದಲ್ಲಿ ಡ್ರೋನ್ ಹಾಗೂ ಕ್ಯಾಮರಾ ಬಳಕೆಗೆ ನಿಷೇಧ ಹೇರಲಾಗಿತ್ತು. ಆದರೆ  ಡ್ರೋನ್ ಹಾರಿರೋದ್ರಿಂದ  ಗುಪ್ತಚರ ಸಂಸ್ಥೆಗಳು(INTELLIGENCE AGENCY) ಪುಲ್ ಆಕ್ಟಿವ್ ಆಗಿವೆ.

ವಿಡಿಯೋ ನೋಡಿ ಎಚ್ಚೆತ್ತುಕೊಂಡಿರುವ ನೌಕಾ ನೆಲೆ ಅಧಿಕಾರಿಗಳು   ಹನಿಟ್ರ್ಯಾಪ್ ಮೂಲಕ ಮಾಹಿತಿ ಕಲೆ ಹಾಕುತ್ತಿದ್ದವರು ಈಗ ಡ್ರೋನ್ ಬಳಸತೊಡಗಿದ್ರಾ ಎಂಬ ಅನುಮಾನದಲ್ಲಿದ್ದಾರೆ. ಅರಣ್ಯ ಇಲಾಖೆ(FOREST DEPARTMENT), ಹೆದ್ದಾರಿ(HIGHWAY) ಕಾಮಗಾರಿ ನಡೆಸ್ತಿರುವ ಐಆರ್ ಬಿ (IRB) ಹಾಗೂ ರಾಷ್ಟ್ರೀಯ ಹೆದ್ದಾರಿ(NATIONAL HIGHWAY) ಇಲಾಖೆ ಬಳಿ ವಿಚಾರಿಸಿ ಕನ್ಫರ್ಮ್ ಮಾಡಿಕೊಂಡಿದ್ದು ತಾವ್ಯಾರು  ಡ್ರೋನ್ ಬಳಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹೀಗಾಗಿ ಸಂಶಯದ ಹಿನ್ನೆಲೆಯಲ್ಲಿ ನೌಕಾಪಡೆ ಹಾಗೂ ಗುಪ್ತಚರ ಇಲಾಖೆಗಳಿಂದ ಎಲ್ಲಾ ಆಯಾಮಗಳಿಂದಲೂ  ತನಿಖೆ  ಮುಂದುವರಿಸಿದ್ದಾರೆ. ಹಗಲಿನ ವೇಳೆ ನೌಕಾ ನೆಲೆ ವ್ಯಾಪ್ತಿಯಲ್ಲಿ ನಿಲ್ಲಲು ಧೈರ್ಯ ಮಾಡದವರು ರಾತ್ರಿ ಯಾರು ಯಾವ ಧೈರ್ಯದ ಮೇಲೆ ದ್ರೋಣ್ ಹಾರಿಸಿದರು ಎಂಬ ಪ್ರಶ್ನೆ ಉದ್ಭವಿಸಿದೆ. ದುಷ್ಟ ಶಕ್ತಿಗಳ ಕಣ್ಣು ನೌಕಾನೆಲೆಯ ಮೇಲೆ ಬಿದ್ದಿರುವುದು ಈ ಘಟನೆಯಿಂದ ಗೊತ್ತಾಗುತ್ತಿದೆ.

ಇದನ್ನು ಓದಿ : ರೈಲ್ವೆ ಟ್ರ್ಯಾಕ್ ಮ್ಯಾನ್ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ

ಕೊನೆ ಸಂದರ್ಭದಲ್ಲಿ ಸಿಕ್ಕ ಎಲುಬು ಯಾರದ್ದು.?

ಉತ್ತರಕನ್ನಡ ಜಿಲ್ಲೆಗೆ ತಿರುಪತಿ ರೈಲು

ರಾಮಕಥಾ ಕೇಳಲು ಬಂದು ನೀರಲ್ಲಿ ಮುಳುಗಿದ