ಕಾರವಾರ(Karwar) : ಗ್ಯಾಸ್ ಟ್ಯಾಂಕರ್(Gas tanker), ಜೆಸಿಬಿ (JCB) ಹಾಗೂ ಬೈಕ್(Bike) ನಡುವೆ ಅಪಘಾತ(Accident) ಸಂಭವಿಸಿದ ಘಟನೆ ಅರಗಾದ ಕದಂಬ ನೌಕಾನೆಲೆ(Kadamba Noukanele) ಮೇನ್ ಗೇಟ್ ಬಳಿ ನಡೆದಿದೆ.
ಅಂಕೋಲಾ ಕಡೆಯಿಂದ ಕಾರವಾರದತ್ತ (Ankola to Karwar) ಚಲಿಸುತ್ತಿದ್ದ ಎಚ್‌ಪಿ ಕಂಪನಿಯ ಗ್ಯಾಸ್ ಟ್ಯಾಂಕರ್(Gas Tanker), ಕಾರವಾರದಿಂದ ಅಂಕೋಲಾದತ್ತ(Karwar to Ankola) ತೆರಳುತ್ತಿದ್ದ ಜೆಸಿಬಿ ಹಾಗೂ ನೆವಲ್ ದಿಂದ ಹೆದ್ದಾರಿ ಕಡೆ ಬರುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಅಪಘಾತದಿಂದಾಗಿ ಅರ್ಧ ಗಂಟೆಯಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಸ್ಥಳಕ್ಕೆ ಕಾರವಾರ ಪೊಲೀಸರು(KARWAR Police) ಆಗಮಿಸಿದ್ದು ಸಂಚಾರ ಸುಗಮಗೊಳಿಸಿದ್ದಾರೆ.
ಇದನ್ನು ಓದಿ : ಅಡಿಕೆ ಕ್ಯಾನ್ಸರ್ ಕಾರಕವಲ್ಲ