ಕುಮಟಾ(KUMTA) : ಗಾರೆ ಕೆಲಸದ ಬಂದಿದ್ದ ಕಾರ್ಮಿಕರ ನಡುವೆ (Labours Clash) ಜಗಳ ನಡೆದು ಓರ್ವನನ್ನ ಕೊಲೆಗೈದ ಘಟನೆ ಕುಮಟಾದಲ್ಲಿ ನಡೆದಿದೆ.
ಕುಮಟಾ ಸರ್ಕಾರಿ ಆಸ್ಪತ್ರೆ (Government Hospital) ಪಕ್ಕದ ಕ್ವಾಟ್ರಾಸ್ ನಲ್ಲಿ ರಾತ್ರಿ ಈ ಘಟನೆ ನಡೆದಿದೆ. ಹುಬ್ಬಳ್ಳಿ(Hubballi) ಮೂಲದ ಇಮ್ತಿಯಾಜ್ ಕೊಲೆಯಾದ ದುರ್ದೈವಿ. ಆರೋಪಿಗಳಾದ ಹುಬ್ಬಳ್ಳಿಯ ಮೌನೇಶ್ ಹಾಗೂ ಸಾಧಿಕ್ ಆರೋಪಿಗಳು.
ನಿನ್ನೆ ಮಧ್ಯೆ ರಾತ್ರಿ ನಾಲ್ವರು ಊಟ ಮಾಡಿದ್ದಾರೆ. ಇದರಲ್ಲಿ ಮೊಯುದ್ದೀನ್ ಎಂಬಾತ ಊಟ ಮಾಡಿ ಮಲಗಿದ್ದ. ಕುಡಿತದ ನಶೆಯಲ್ಲಿ ಮೂವರ ನಡುವೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತೆರಳಿ ಮೌನೇಶ್, ಸಾಧಿಕ್ ಸೇರಿ ಇಮ್ತಿಯಾಜ್ ನನ್ನ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ. ಬಳಿಕ ಪರಾರಿಯಾಗಿದ್ದಾರೆ.
ಬೆಳಿಗ್ಗೆ ಕೊಲೆಯಾಗಿರುವುದನ್ನ ನೋಡಿದ ಮೊಯುದ್ದಿನ್ ಎಂಬಾತ ಪೊಲೀಸರಿಗೆ ವಿಷಯ ತಿಳಿಸಿದ್ದಾನೆ. ಕುಮಟಾ ಪೊಲೀಸರು(KUMTA Police) ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದು,ಇಬ್ಬರು ಆರೋಪಿಗಳನ್ನು ಹುಬ್ಬಳ್ಳಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಸ್ಪಿ ಎಂ. ನಾರಾಯಣ್ (Sp NARAYAN ) ಭೇಟಿದ್ದು ಪರಿಶೀಲನೆ ನಡೆಸಿದ್ದಾರೆ. ಕುಮಟಾ ಪೊಲೀಸ್ ಠಾಣೆಯಲ್ಲಿ(KUMTA police Station) ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ಬಸ್ ಚಾಲಕ ನಿರ್ವಹಕರ ಸಮಯ ಪ್ರಜ್ಞೆ