ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಭಟ್ಕಳ(Bhatkal) :  ರಾಷ್ಟ್ರೀಯ ಹೆದ್ದಾರಿ(National Highway)  ಭಟ್ಕಳದ ಹೃದಯ ಭಾಗದಲ್ಲಿದ್ದ ಸಂಶುದ್ದೀನ್ ವೃತ್ತವನ್ನ(Samshuddin Circle)  ತೆರವುಗೊಳಿಸುವ ಮೂಲಕ ಭಟ್ಕಳದ ಲ್ಯಾಂಡ್ ಮಾರ್ಕ್(Bhatkal Land Mark) ಒಂದು ಇತಿಹಾಸದ ಪುಟದಿಂದ ಅಳಿಸಲಾಗಿದೆ.

ಭಟ್ಕಳ ಪಟ್ಟಣದಲ್ಲಿ ‘ಪ್ಯೂ‌ರ್ ಗೋಲ್ಡ್'(Pure Gold) ಅಂಗಡಿಯ ಗಡಿಯಾರದ ಗೋಪುರ(Watch Tower) ಮತ್ತು ಬೃಹತ್ತಾಕಾರದ ಬಳೆಗಳು ಇನ್ಮುಂದೆ ನೆನಪು ಮಾತ್ರ. ಚತುಷ್ಪಥ ರಾಷ್ಟ್ರೀಯ ಹೆದ್ದಾರಿ(National Highway) ಅಗಲೀಕರಣಕ್ಕಾಗಿ ವೃತ್ತದ  ಗೋಪುರವನ್ನು ಜೆಸಿಬಿ ಯಂತ್ರದ ಮೂಲಕ  ನೆಲಸಮಗೊಳಿಸಲಾಗಿದೆ.

ಭಟ್ಕಳದಲ್ಲಿ  ಪ್ಯೂರ್ ಗೋಲ್ಡ್ ಚಿನ್ನದ ಮಳಿಗೆ ಆರಂಭವಾದ ಸಂದರ್ಭದಲ್ಲಿ ಅದರ ಮಾಲೀಕ ಶಬೀಬ್ ಕೋಲಾ ಅವರು ತಮ್ಮ ಮಳಿಗೆಯ ಜಾಹೀರಾತನ್ನ ನೋಡುಗರ ಸೆಳೆಯುವ ಹಾಗೆ ಚಿತ್ರಿಸುತ್ತಿದ್ದರು. ಅದೇ ರೀತಿ ಭಟ್ಕಳದ ಮುಖ್ಯ ಸ್ಥಳ(Bhatkal Main Place) ಸಂಶುದ್ಧಿನ್ ವೃತ್ತದಲ್ಲಿ 2002ರಲ್ಲಿ ಸುಮಾರು ₹8-10 ಲಕ್ಷ ವೆಚ್ಚದಲ್ಲಿ ಈ ಗೋಪುರ ನಿರ್ಮಿಸಿದ್ದರು. ದುಬೈಯಲ್ಲಿ(Dubai) ಕಂಡ ಗಡಿಯಾರದ ಗೋಪುರದ ವಿನ್ಯಾಸದಿಂದ ಪ್ರೇರಿತವಾಗಿ ನಿರ್ಮಿಸಲಾದ ಈ ರಚನೆ ನಾಲ್ಕು ದಿಕ್ಕುಗಳಲ್ಲಿ ಗಡಿಯಾರ, ಮಧ್ಯದಲ್ಲಿ ಚಿನ್ನದ ಬಣ್ಣದ ಬಳೆ ಮಾದರಿ ಹಾಗೂ ತುದಿಯಲ್ಲಿ ಸುಮಾರು 2 ಟನ್ ತೂಕದ ಗ್ರಾನೈಟ್ ಬಾಲ್ ಹೊಂದಿ ಆಕರ್ಷಕವಾಗಿ ಕಂಗೊಳಿಸುತ್ತಿತ್ತು.

“ಭಟ್ಕಳದ ಸಂಶುದ್ದಿನ್ ವೃತ್ತ”ದಲ್ಲಿರುವ ಈ ಗೋಪುರದಿಂದ ಭಟ್ಕಳ ಪಟ್ಟಣವನ್ನ ಗುರುತಿಸುವಷ್ಟು  ಪ್ರಸಿದ್ದಿಯಾಗಿತ್ತು.  ಅಲ್ಲದೇ  ವಿವಿಧ ರಾಜಕೀಯ ಪಕ್ಷಗಳ  ಪ್ರತಿಭಟನೆಗಳು, ಜಾಥಾಗಳು, ವಿಜಯೋತ್ಸವಗಳಿಗೆ   ಈ ವೃತ್ತ ಸಾಕ್ಷಿಯಾಗಿತ್ತು. ಅಲ್ಲದೇ ಪೊಲೀಸರ ತಲೆನೋವಿಗೂ ಕಾರಣವಾಗಿತ್ತು. ಬಂಟಿಂಗ್ಸ್ ವಿಚಾರದಲ್ಲಿ ಆಗಾಗ ಘರ್ಷಣೆಗಳು ಸಂಭವಿಸುತಿತ್ತು. ಇದೀಗ  ಚತುಷ್ಪಥ ಹೆದ್ದಾರಿ ಕಾಮಗಾರಿಗಾಗಿ   ವೃತ್ತವನ್ನು  ತೆರವುಗೊಳಿಸಲಾಗಿದೆ. ಈ ಹಿಂದೆಯೇ ವೃತ್ತದ ಹೆಸರು ಬದಲಾವಣೆಯ ಬಗ್ಗೆ ಚರ್ಚೆಗಳು ಆಧಾರವಿಲ್ಲದೇ ನಡೆಯುತಿತ್ತು. ಇನ್ಮುಂದೆ ಸಂಶುದ್ದೀನ್ ವೃತ್ತ ಯಾವ ಹೆಸರಿನಿಂದ‌ ಕರೆಯಲಾಗುತ್ತೋ ಏನೋ? 

ಇದನ್ನು ಓದಿ : ಮ್ಯಾರಥಾನ್ ಲ್ಲಿ ಭಾಗವಹಿಸಿದ್ದ ಸಬ್ ಇನ್ಸಪೆಕ್ಟರ್ ಕುಸಿದು ಬಿದ್ದು ಸಾವು.

ಅಪ್ರಾಪ್ತರಿಗೆ ಅಮಲು ಪದಾರ್ಥ ಪೂರೈಸಿದ ಕಾರಗದ್ದೆ ನಿವಾಸಿ ಬಂಧನ.