ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕುಮಟಾ(Kumta) :  ಶಾರ್ಟ್ ಸರ್ಕ್ಯೂಟ್ ನಿಂದ ಆಕಸ್ಮಿಕ ಬೆಂಕಿ ತಗುಲಿ ಕಂಪ್ಯೂಟರ್(Computer) ಸೇರಿ ಇತರೆ ವಸ್ತುಗಳು ಸಂಪೂರ್ಣ ಸುಟ್ಟುಕರಕಲಾದ ಘಟನೆ  ಕುಮಟಾ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ರಾಷ್ಟ್ರೀಯ ಹೆದ್ದಾರಿ 66ರ(NH 66) ಪಕ್ಕದಲ್ಲಿರುವ ಸನ್ಮಾನ್ ಹೊಟೇಲ್ ಬಳಿ ಇರುವ ಎಕ್ಸಿಕ್ ಬ್ಯಾಂಕ್‌ನಲ್ಲಿ (Axis Bank ) ಘಟನೆ ನಡೆದಿದೆ.  ಮಂಗಳವಾರ ಬೆಳಿಗ್ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದೆ. ದೊಡ್ಡಮಟ್ಟದಲ್ಲಿ ಹೊಗೆ ಕಾಣಿಸಿಕೊಂಡ ಬಳಿಕ ಅಕ್ಕ-ಪಕ್ಕದಲ್ಲಿನ ಜನ ಹೋಗಿ ನೋಡುವಷ್ಟರಲ್ಲಿ ಒಳಗೆ ಬೆಂಕಿ ಹೊತ್ತಿಕೊಂಡಿರುವುದು ಗೊತ್ತಾಗಿದೆ.

ಬೆಂಕಿ ಅವಘಡದಿಂದ ಬ್ಯಾಂಕ್‌ನಲ್ಲಿದ್ದ ಸುಮಾರು 12ಕ್ಕೂ ಹೆಚ್ಚು ಕಂಪ್ಯೂಟರ್, ಪಿಠೋಪಕರಣ, ಬ್ಯಾಂಕ್‌ ದಾಖಲಾತಿ ಪತ್ರಗಳು ಸಂಪೂರ್ಣ ಸುಟ್ಟು ಹೋಗಿದೆ. ಬೆಂಕಿ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ. ಪೊಲೀಸರು ಘಟನೆ ಕುರಿತಾಗಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನು ಓದಿ : ಭಾರತ ಮತ್ತು ಪಾಕ್ ನಡುವೆ ಯುದ್ಧದ ಕಾರ್ಮೋಡ. ಏಳರಂದು ರಾಷ್ಟ್ರದ್ಯಾಂತ ಮಾಕ್ ಡ್ರಿಲ್.

ಉಡಾಪೆ ಮಾತಿಗೆ ಗಾಯಕ ಸೋನು ನಿಗಮ್ ಗೆ ಫಿಲ್ಮ್ ಚೇಂಬರ್ ಬ್ಯಾನ್.

ಮಂಗಳೂರು ಬಳಿಕ ಮತ್ತೋರ್ವ ರೌಡಿ ಶೀಟರ್ ಫಿನಿಷ್.