ಜೊಯಿಡಾ : ತಾಲೂಕಿನಿಂದ ಜಿಲ್ಲಾ ಕೇಂದ್ರಕ್ಕೆ ಸಂಪರ್ಕದ ಕೊಂಡಿಯಾದ ಅಣಶಿ ಘಟ್ಟ ಮಾರ್ಗದಲ್ಲಿ ಕುಸಿಯುವ ಆತಂಕ ಎದುರಾಗಿದೆ.
ಒಂದು ವೇಳೆ ಮಾರ್ಗದಲ್ಲಿ ಕುಸಿತ ಉಂಟಾದಲ್ಲಿ ರಾಜ್ಯ ಹೆದ್ದಾರಿ 64 ರ ಸಂಚಾರ ಸಂಪೂರ್ಣ ಬಂದ್ ಆಗುವ ಸಾಧ್ಯತೆ ಹೆಚ್ಚಾಗಿದೆ.
ಸದಾಶಿವಗಡ ರಾಮನಗರ ರಾಜ್ಯ ಹೆದ್ದಾರಿ 64 ಇದು ಅಣಶಿ ಘಟ್ಟದ ಮೂಲಕ ಹಾದು ಹೋಗುತ್ತದೆ. ಮಳೆ ಹೆಚ್ಚಾದರೆ ಪ್ರತಿವರ್ಷ ಘಟ್ಟ ಅಂಚಿನಲ್ಲಿ ಕುಸಿಯುತ್ತದೆ. ಈಗಾಗಲೇ ಜೋಯಿಡ ತಾಲೂಕಿನ ವ್ಯಾಪ್ತಿಯಲ್ಲಿ ಮಳೆ ಅಧಿಕವಾಗಿ ಸುರಿಯುತ್ತಿದೆ. ಇದರಿಂದ ಮಾರ್ಗದ ಕೆಲ ಕಡೆಗಳಲ್ಲಿ ಮಣ್ಣು ಕುಸಿದು ಬಿದ್ದಿದೆ. ಇದೇ ರೀತಿ ಮಳೆ ಮುಂದುವರಿದಿದ್ದೆ ಆದಲ್ಲಿ 2021 ಜುಲೈ 21 ರಂದು ನಡೆದ ಅಣಶಿ ಗುಡ್ಡ ಕುಸಿತದ ಘಟನೆ ನೆನಪಿಸಿದರೂ ಅಚ್ಚರಿಯಿಲ್ಲ
ಹೀಗಾಗಿ ಕಾರವಾರ ಮತ್ತು ಜೋಯಿಡ ಸಂಪರ್ಕಿಸುವ ಮಾರ್ಗದ ಬಗ್ಗೆ ಜಿಲ್ಲಾ ಆಡಳಿತ ವಹಿಸುವುದು ಸೂಕ್ತ ಎಂದು ನಾಗರಿಕರು ತಿಳಿಸಿದ್ದಾರೆ.