ಭಟ್ಕಳ : ಭಟ್ಕಳದಲ್ಲಿ ನಿದ್ದೆ ಮಾಡುತ್ತಿದ್ದ ಅಧಿಕಾರಿಗಳು ದಡಬಡಾಯಿಸಿ ಎದ್ದಿದ್ದಾರೆ. ರಾಷ್ಟೀಯ ಹೆದ್ದಾರಿ 66 ಪಿಬಿ ಇಬ್ರಾಹಿಂ ಪೆಟ್ರೋಲ್ ಬಂಕ್ ಸಮೀಪದಲ್ಲಿ ರಾಶಿರಾಶಿಯಾಗಿ ಬಿದ್ದಿದ್ದ ತ್ಯಾಜ್ಯಗಳನ್ನ ಸ್ವಚ್ಛಗೊಳಿಸಿದ್ದಾರೆ.
ಭಟ್ಕಳ ಹೆದ್ದಾರಿಯಲ್ಲಿ ಓಡಾಡುವ ಆಸುಪಾಸಿನಲ್ಲಿ ಕಸ ವಿಲೇವಾರಿ ಮಾಡದೇ ನಿರ್ಲಕ್ಷ್ಯ ಮಾಡುತ್ತಿರುವ ಬಗ್ಗೆ ಇ ಸಮಾಚಾರ ನ್ಯೂಸ್ ನಿನ್ನೆ ವಿಸ್ತ್ರತ ಸುದ್ದಿ ಮಾಡಿತ್ತು. ನಿದ್ದೆಯಲ್ಲಿರುವ ಅಧಿಕಾರಿಗಳನ್ನ ಎಚ್ಚರಿಸಿತ್ತು. ಇದೀಗ ಹೆಬಳೆ ಗ್ರಾಮ ಪಂಚಾಯತ್ ವತಿಯಿಂದ ಅಧಿಕಾರಿಗಳು ಜೆಸಿಬಿ ಸಹಾಯದಿಂದ ತ್ಯಾಜ್ಯವನ್ನ ಎತ್ತಿದ್ದಾರೆ.
ಇಲ್ಲಿನ ತ್ಯಾಜ್ಯ ಅವ್ಯವಸ್ಥೆಯ ಬಗ್ಗೆ ವೈದ್ಯರೊಬ್ಬರೂ ತಮ್ಮ ಅಸಮಾಧಾನ ಹೊರಹಾಕಿದ್ದರು. ಭಟ್ಕಳ ತಾಲೂಕಿನ ಕೆಲವೆಡೆ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಕಸದ ವಿಲೇವಾರಿ ಸರಿಯಾಗಿ ಆಗದ ಕಾರಣದಿಂದ ಇಲ್ಲಿ ಗಲೀಜು ವಾತಾವರಣ ನಿರ್ಮಾಣವಾಗುತ್ತಿದೆ. ಈಗಾಗಲೇ ನಿರ್ಲಕ್ಷ ಮಾಡಿದರಿಂದಲೇ ಕೆಲ ಭಾಗಗಳಲ್ಲಿ ಡೆಂಗ್ಯೂ, ಮಲೇರಿಯಾದಂತ ರೋಗಗಳು ಕಾಣಿಸುತ್ತಿವೆ.
ಭಟ್ಕಳ ಹೆದ್ದಾರಿಯಲ್ಲಿ ಓಡಾಡುವ ನಾಗರಿಕರ ರೇಜಿಗೆ ಕಾರಣವಾಗಿದ್ದ ಕಸದ ರಾಶಿ ಅಂತೂ ಸ್ವಚ್ಛವಾಗಿದೆ. ಇನ್ನೂ ಮುಂದೆ ಕಸ ಬೇಕಾಬಿಟ್ಟಿಯಾಗಿ ಏಸೆಯದಂತೆ ನಾಗರಿಕರು ಕಾಳಜಿ ವಹಿಸಬೇಕಾಗಿದೆ. ಸಂಬಂಧಪಟ್ಟ ಅಂಗಡಿಕಾರರು, ಕಟ್ಟಡಗಳ ಮಾಲೀಕರು ನಿರ್ಲಕ್ಷ ಮಾಡಿದರೆ ಬಾರೀ ಪ್ರಮಾಣದ ದಂಡ ಹಾಕಿ ಇನ್ಮುಂದೆ ಪರಿಸರ ಸ್ವಚ್ಛತೆ ಕೈಗೊಳ್ಳುವ ಕೆಲಸ ಮಾಡಿಸಬೇಕಾಗಿದೆ. ಕೇವಲ ಪರಿಸರ ದಿನಾಚರಣೆಯಂದು ಮಾತ್ರ ಸ್ವಚ್ಛತೆಯಲ್ಲ, ಪ್ರತಿದಿನವೂ ಪರಿಸರ ಕಾಳಜಿ ಮೆರೆಯೋಣ ಎಂಬುದು ನಮ್ಮ ಆಶಯ.